ಏನೆಕಲ್ಲು: ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಸುಪಾಸು ಮಳೆ ನೀರು
Friday, July 19, 2024
ಸುಬ್ರಹ್ಮಣ್ಯ: ಏನೆಕಲ್ಲಿನ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಎದುರು ಭಾಗ ಹಾಗೂ ದೇವಸ್ಥಾನಕ್ಕೆ ಹೋಗುವ ರಸ್ತೆ ಮಳೆ ನೀರಿನಿಂದ ಆವರಿಸಿರುವುದಾಗಿ ವರದಿಯಾಗಿದೆ.
ದೇವಸ್ಥಾನದ ಎದುರು ಭಾಗದ ನದಿ ಉಕ್ಕಿ ಹರಿಯುತ್ತಿದೆ. ಇಲ್ಲೇ ನದಿ ಬದಿ ವಿದ್ಯುತ್ ಟಿ.ಸಿ ಇದ್ದು ಮುಂಜಾಗ್ರತಾ ಕ್ರಮವಾಗಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಎರಡು ವರ್ಷಗಳ ಹಿಂದೆಯೂ ಮಳೆ ನೀರು ಬಂದು ದೇವಸ್ಥಾನದ ಗರ್ಭ ಗುಡಿ ವರೆಗೆ ನೀರು ಬಂದಿತ್ತು.