Subramanya: ಸುಬ್ರಹ್ಮಣ್ಯ ಕುಮಾರಧಾರ ಸ್ಥಾನಗಟ್ಟ ಸಂಪೂರ್ಣ ಮುಳುಗಡೆ
Monday, July 15, 2024
ಸುಬ್ರಹ್ಮಣ್ಯ: ಪಶ್ಚಿಮ ಘಟ್ಟ ಪ್ರದೇಶದಲ್ಲಿ ನಿನ್ನೆ ರಾತ್ರಿಯಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಅಧಿಕ ಪ್ರಮಾಣದ ನೀರು ಕುಮಾರಧಾರ ನದಿಯಲ್ಲಿ ಹರಿದು ಬರುತ್ತಿದ್ದು ಇಂದು ಬೆಳಗ್ಗೆನಿಂದ ಕುಮಾರಧಾರ ಸ್ಥಾನ ಘಟ್ಟ ಸಂಪೂರ್ಣ ಮುಳುಗಡೆಗೊಂಡಿದೆ.
ಕ್ಷೇತ್ರಕ್ಕೆ ಬರುವ ಭಕ್ತಾದಿಗಳಿಗೆ ತೀರ್ಥ ಸ್ನಾನ ಮಾಡಲು ನದಿಯಲ್ಲಿ ಅವಕಾಶ ಇರೋದಿಲ್ಲ. ಆದರೆ ಈ ದೇವಳದ ವತಿಯಿಂದ ಸ್ನಾನಘಟ್ಟದ ಪಕ್ಕದಲ್ಲಿ ನೀರಿನ ಡ್ರಮ್ಮಗಳನ್ನು ಇಟ್ಟು ತೀರ್ಥ ಸ್ನಾನ ಮಾಡಲು ಶ್ರೀ ದೇವಳದ ವತಿಯಿಂದ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಯಾತ್ರಿಕರು ನದಿಗೆ ಇಳಿಯದಂತೆ ಪೊಲೀಸ್ ಇಲಾಖೆ ಹಾಗೂ ದೇವಳದ ಸೆಕ್ಯೂರಿಟಿ ಗಾರ್ಡುಗಳು ಬಂದೋಬಸ್ತ್ ಅಲ್ಲಿ ತೊಡಗಿದ್ದಾರೆ.

