Udupi: ತ್ರಿಶಾ ಕ್ಲಾಸಸ್: ಸಿಎ ಫೈನಲ್, ಇಂಟರ್ ಮೀಡಿಯೆಟ್ ಸಾಧಕರಿಗೆ ಸನ್ಮಾನ

Udupi: ತ್ರಿಶಾ ಕ್ಲಾಸಸ್: ಸಿಎ ಫೈನಲ್, ಇಂಟರ್ ಮೀಡಿಯೆಟ್ ಸಾಧಕರಿಗೆ ಸನ್ಮಾನ


ಉಡುಪಿ: ಉಡುಪಿಯ  ತ್ರಿಶಾ ಕ್ಲಾಸಸ್ ವತಿಯಿಂದ ಮೇ 2024 ರಲ್ಲಿ ಪರೀಕ್ಷೆ ಬರೆದ  ಸಿಎ ಫೈನಲ್ ಹಾಗೂ ಇಂಟರ್ ಮೀಡಿಯೆಟ್ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವು ಜುಲೈ 17ರಂದು ಕಟಪಾಡಿಯ  ಶ್ರೀಮತಿ ಶಾರದಾ ವಾಸುದೇವ ಕಿಣಿ ಕಲಾ ಭವನದಲ್ಲಿ ನಡೆಯಿತು. 

ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ತ್ರಿಶಾ ಸಂಸ್ಥೆಯ ಸಂಸ್ಥಾಪಕರು ಸಿಎ ಗೋಪಾಲಕೃಷ್ಣ ಭಟ್ ರವರು ಸತತ ಪ್ರಯತ್ನ ಹಾಗೂ ಛಲದಿಂದ ನೀವು ಗುರಿ ತಲುಪುವಲ್ಲಿ ಯಶಸ್ಸು ಗಳಿಸಿದ್ದೀರಿ ಎಂದು ಉತ್ತೀರ್ಣರಾದ ವಿದ್ಯಾರ್ಥಿಗಳ ಸಾಧನೆಗೆ ಶ್ಲಾಘಿಸಿ, ಅವರ ವೃತ್ತಿಪರ ಬದುಕಿಗೆ  ಹಾಗೂ ಆರ್ಟಿಕಲ್ ಶಿಪ್ ನಡೆಸುವ ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ಶುಭಹಾರೈಸಿದರು. ವಿದ್ಯಾರ್ಥಿಗಳು ತಮ್ಮ ಸಿಎ ಪಯಣದ ಅನುಭವಗಳನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಸಿಎ ಫೈನಲ್ ಹಾಗೂ ಇಂಟರ್ ಮೀಡಿಯೆಟ್ ವಿದ್ಯಾರ್ಥಿಗಳನ್ನು ಹೆತ್ತವರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.

ಸಿದ್ಧಾಂತ ಫೌಂಡೇಶನ್ ಟ್ರಸ್ಟಿಗಳಾದ ನಮಿತಾ ಜಿ ಭಟ್ ಹಾಗೂ ರಾಮ್ ಪ್ರಭು ಮತ್ತು ತ್ರಿಶಾ ಕ್ಲಾಸಸ್ ಉಡುಪಿಯ ಮುಖ್ಯಸ್ಥರು ವಿಘ್ನೇಶ್ ಶೆಣೈ, ತ್ರಿಶಾ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ನಾರಾಯಣ್ ರಾವ್ , ಕಾಲೇಜು ಹಾಗೂ ತ್ರಿಶಾ ಕ್ಲಾಸಸ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಸನ್ಮಾನಿಸಲ್ಪಡುವ ವಿದ್ಯಾರ್ಥಿಗಳ ಹೆಸರನ್ನು ತ್ರಿಶಾ ಕ್ಲಾಸಸ್ ಶೈಕ್ಷಣಿಕ ಸಂಯೋಜಕರಾದ  ಪ್ರಜ್ಞಾ ಹಾಗೂ ಗೌರಿ ಯವರು ವಾಚಿಸಿದರು. ಪ್ರಾಧ್ಯಾಪಕರಾದ ಧೀರಜ್ ಬೆಳ್ಳಾರೆ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article