Udupi: ಶ್ರೀಕೃಷ್ಣ ಮಹಾಭಿಷೇಕ ಸಂಪನ್ನ
Tuesday, July 16, 2024
ಉಡುಪಿ: ಇಲ್ಲಿನ ಶ್ರೀಕೃಷ್ಣಮಠದಲ್ಲಿ ಪ್ರತಿ ವರ್ಷ ಆಷಾಢ ಶುದ್ಧ ದಶಮಿಯಂದು ನಡೆಯುವ ವಾರ್ಷಿಕ ಮಹಾಭಿಷೇಕ ಮಂಗಳವಾರ ಸಂಪನ್ನಗೊಂಡಿತು.
ಪರ‍್ಯಾಯ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಮಹಾಭಿಷೇಕ ನಡೆಸಿದರು. ಅದಮಾರು ಮಠದ ಹಿರಿಯ ಯತಿ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಭಾಗವಹಿಸಿದ್ದರು.
ಶ್ರೀಕೃಷ್ಣನಿಗೆ ಹಾಲು, ಮೊಸರು, ತುಪ್ಪ, ಜೇನು ಮತ್ತು ಸಕ್ಕರೆಯುಕ್ತವಾಗಿ ಪಂಚಾಮೃತ ಅಭಿಷೇಕ ನಡೆಸಲಾಯಿತು. ಬಳಿಕ ಸೀಯಾಳ (ಎಳನೀರು) ಅಭಿಷೇಕ ನಡೆಸಲಾಯಿತು. ಋತ್ವಿಕರು ವೇದಮಂತ್ರ, ವಿಷ್ಣುಸಹಸ್ರನಾಮ ಇತ್ಯಾದಿಗಳನ್ನು ಪಠಿಸಿದರು
ಶ್ರೀಕೃಷ್ಣನಿಗೆ ಪಟ್ಟಾಭಿಕೃಷ್ಣ ಅಲಂಕಾರ ಮಾಡಲಾಗಿತ್ತು. ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಮಹಾಪೂಜೆ ನೆರವೇರಿಸಿದರು.
ಬುಧವಾರ ಪ್ರಥಮ ಏಕಾದಶಿ ಹಿನ್ನೆಲೆಯಲ್ಲಿ ತಪ್ತ ಮುದ್ರಾಧಾರಣೆ ನಡೆಯಲಿದೆ.