ಸೆ.22-29: 26ನೇ ವರ್ಷದ ಭಜನಾ ಕಮ್ಮಟ
ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ (ರಿ.) ಧರ್ಮಸ್ಥಳ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ 26ನೇ ವರ್ಷದ ಭಜನಾ ಕಮ್ಮಟವು ಸೆಪ್ಟೆಂಬರ್ 22 ರಂದು ಪ್ರಾರಂಭಗೊಂಡು ಸೆಪ್ಟೆಂಬರ್ 29 ರಂದು ಭಜನೋತ್ಸವದೊಂದಿಗೆ ಸಮಾಪನಗೊಳ್ಳಲಿದೆ.
ಭಜನಾ ಕಮ್ಮಟದಲ್ಲಿ ಭಾಗವಹಿಸಲು ಅರ್ಹ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ.
ಕಮ್ಮಟದಲ್ಲಿ ಭಾಗವಹಿಸುವವರು 18 ವರ್ಷದಿಂದ 45 ವರ್ಷದ ಒಳಗಿನವರಾಗಿರಬೇಕು., ಭಜನೆಯಲ್ಲಿ ರಾಗ, ತಾಳ, ಲಯದ ಜ್ಞಾನವುಳ್ಳವರಾಗಿರಬೇಕು., ಇದುವರೆಗಿನ ಯಾವುದೇ ಭಜನಾ ಕಮ್ಮಟದಲ್ಲಿ ಭಾಗವಹಿಸದೇ ಇರುವವರಾಗಿರಬೇಕು., ಒಂದು ಭಜನಾ ಮಂಡಳಿಯಿಂದ 2 ಜನ ಶಿಬಿರಾರ್ಥಿಗಳಿಗೆ ಮಾತ್ರ ಅವಕಾಶ., ತಾವು ಕಲಿತು, ಇನ್ನೊಬ್ಬರಿಗೆ ಕಲಿಸಿಕೊಡುವವರಾಗಿರಬೇಕು.
ಆಸಕ್ತರು ಸೆಪ್ಟೆಂಬರ್ 10ರ ಮೊದಲು ಸಂಬಂಧಪಟ್ಟ ಪದಾಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಭಜನಾ ಕಮ್ಮಟದ ಸಂಚಾಲಕ ಟಿ. ಸುಬ್ರಹ್ಮಣ್ಯ ಪ್ರಸಾದ್ ಹಾಗೂ ಭಜನಾ ಕಮ್ಮಟದ ಕಾರ್ಯದರ್ಶಿ ವೀರು ಶೆಟ್ಟಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 9632064164, 8130132835, 9663464648 ಸಂಪರ್ಕಿಸಬಹುದಾಗಿದೆ.