Ujire: ತುಂಬಿ ಹರಿದ ನೇತ್ರಾವತಿ ಸ್ನಾನಘಟ್ಟ
Wednesday, July 17, 2024
ಉಜಿರೆ: ಜು.17 ರಂದು ದಿನವಿಡೀ ಬಿಟ್ಟು ಬಿಟ್ಟು ಧಾರಾಕಾರ ಮಳೆ ಸುರಿದ ಕಾರಣ ನೇತ್ರಾವತಿ ನದಿ ಉಕ್ಕಿ ಹರಿದು ಧರ್ಮಸ್ಥಳದ ಸ್ನಾನ ಘಟ್ಟ ಮುಳುಗಡೆಗೊಂಡಿದೆ.
ಯಾವುದೇ ಸಂದರ್ಭದಲ್ಲಿ ನದಿಯಲ್ಲಿ ಪ್ರವಾಹ ಬರುವ ಸಂಭವವಿದ್ದು, ಯಾತ್ರಿಕರು ಜಾಗ್ರತೆ ವಹಿಸುವಂತೆ ಮುನ್ನೆಚ್ಚರಿಕೆ ನೀಡಲಾಗಿದೆ. ಭಾರೀ ಮಳೆಯಿಂದಾಗಿ ವಾಹನ ಸಂಚಾರಕ್ಕೆ ತೊಡಕುಂಟಾಗಿದೆ.
ಮೇಲಂತಬೆಟ್ಟು ಎಂಬಲ್ಲಿ ರಘುಚಂದ್ರ ಎಂಬವರ ಮನೆ ಹಿಂದಿನ ಗುಡ್ಡ ಜರಿದು ನೀರಿನ ಟ್ಯಾಂಕ್‌ಗೆ ಹಾನಿಯಾಗಿದೆ. ಮನೆಯವರು ಎಚ್ಚರಿಕೆಯಿಂದ ಇರಲು ಹಾಗೂ ಅವಶ್ಯಕತೆ ಇದ್ದಲ್ಲಿ ಸ್ಥಳಾಂತರಕ್ಕೂ ಸಿದ್ದವಿರಲು ತಿಳಿಸಲಾಗಿದೆ.