ಗತವನ್ನು ಅರಿತರೆ ಯಶಸ್ವಿ ಜೀವನ: ಡಾ. ಬಿ.ಎ. ಕುಮಾರ ಹೆಗ್ಡೆ

ಗತವನ್ನು ಅರಿತರೆ ಯಶಸ್ವಿ ಜೀವನ: ಡಾ. ಬಿ.ಎ. ಕುಮಾರ ಹೆಗ್ಡೆ


ಉಜಿರೆ: ಗತವನ್ನು ಅರಿಯುವುದರಿಂದ ಯಶಸ್ವಿ ಜೀವನ ಸಾಧ್ಯವೆಂದು ಉಜಿರೆಯ ಶ್ರೀ ಧ.ಮಂ. ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ ಹೇಳಿದರು.

ಕಾಲೇಜಿನಲ್ಲಿ ಜು.15ರಂದು ಇತಿಹಾಸ ಸಂಘದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಇತಿಹಾಸವನ್ನು ಸಮರ್ಪಕವಾಗಿ ಅಧ್ಯಯನ ಮಾಡುವುದರಿಂದ ನಾವು ಸ್ಫೂರ್ತಿ ಪಡೆದು, ಅದರ ಮೂಲಕ ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳಬಹುದು. ಅಲ್ಲದೆ, ಅಚ್ಚರಿ ಎನಿಸುವಂತಹ ಹತ್ತು ಹಲವು ಸಂಗತಿಗಳು ನಮ್ಮ ಇತಿಹಾಸದ ಪುಟಗಳಲ್ಲಿ ಅಡಕವಾಗಿವೆ ಎಂದರು.

ಇತಿಹಾಸ ವಿಭಾಗ ಮುಖ್ಯಸ್ಥ ಡಾ. ಸನ್ಮತಿ ಕುಮಾರ್ ಅವರು ವಿಭಾಗದ ವಾರ್ಷಿಕ ಕಾರ್ಯಚಟುವಟಿಕೆ ಕುರಿತು ಬೆಳಕು ಚೆಲ್ಲಿದರು.

ಸಹಾಯಕ ಪ್ರಾಧ್ಯಾಪಕಿ ಅಭಿಜ್ಞಾ ಉಪಾಧ್ಯಾಯ, ಇತಿಹಾಸ ಸಂಘದ ನೂತನ ಸಂಯೋಜಕರಾದ ದುರ್ಗಾಪ್ರಸನ್ನ ಹಾಗೂ ಮಾನಸ ಉಪಸ್ಥಿತರಿದ್ದರು.

ಅಂತಿಮ ಬಿ.ಎ. ವಿದ್ಯಾರ್ಥಿನಿ ಸುಪ್ರೀತಾ ಸ್ವಾಗತಿಸಿದರು. ದ್ವಿತೀಯ ಬಿ.ಎ.ಯ ಗೌರವಿ ವಂದಿಸಿ, ತೃತೀಯ ಬಿ.ಎ.ಯ ಅಮಿತ ಪ್ರಜ್ಞಾ ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article