
Ujire: ಮಳೆಗಾಲದಲ್ಲಿ ಜಲಪಾತ ವೀಕ್ಷಣೆಗೆ ನಿರ್ಬಂಧ
Thursday, July 4, 2024
ಉಜಿರೆ: ಕೆಲದಿನಗಳಿಂದ ವಿಪರೀತ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಜಲಪಾತಗಳು ಅಪಾಯಕಾರಿ ಮಟ್ಟದಲ್ಲಿ ಧುಮ್ಮಿಕ್ಕುತ್ತಿರುವ ಕಾರಣ ಬೆಳ್ತಂಗಡಿ ತಾಲೂಕಿನ ಎರ್ಮಾಯಿ, ಕಡಮಗುಂಡಿ, ಬಂಡಾಜೆ, ಬೊಳ್ಳೆ, ಎಳನೀರು ಮೊದಲಾದ ಜಲಪಾತಗಳಿಗೆ ಸಾರ್ವಜನಿಕರಿಗೆ ಮುಂದಿನ ಆದೇಶದ ತನಕ ಪ್ರವೇಶ ನಿರ್ಬಂಧ ಹೇರಲಾಗಿದೆ.
ತಾಲೂಕಿನ ಪ್ರವಾಸಿ ತಾಣ ಗಡಾಯಿಕಲ್ಲು ಪ್ರದೇಶಕ್ಕೂ ಚಾರಣ ನಿರ್ಬಂಧ ವಿಧಿಸಲಾಗಿದೆ ಎಂದು ಬೆಳ್ತಂಗಡಿ ವನ್ಯಜೀವಿ ಭಾಗದ ಆರ್‌ಎಫ್‌ಒ ಸ್ವಾತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.