
Ullal: ನೀಟ್ ಪರೀಕ್ಷೆಯಲ್ಲಿನ ಅವ್ಯವಹಾರ ಖಂಡಿಸಿ ಎನ್‌ಎಸ್‌ಯುಐ ಪ್ರತಿಭಟನೆ
ಉಳ್ಳಾಲ: ಎನ್.ಎಸ್.ಯುಐ. ಮಂಗಳೂರು ವಿಧಾನ ಸಭಾ ಕ್ಷೇತ್ರ ಇದರ ವತಿಯಿಂದ ನೀಟ್ ಪರೀಕ್ಷೆಯಲ್ಲಿನ ಅವ್ಯವಹಾರ ಖಂಡಿಸಿ ಕೇಂದ್ರ ಸರಕಾರ ವಿದ್ಯಾರ್ಥಿಗಳ ಭವಿಷ್ಯದಲ್ಲಿ ಚೆಲ್ಲಾಟ ಆಡುತ್ತಿರುವುದನ್ನು ವಿರೋಧಿಸಿ ಅಬ್ಬಕ್ಕ ಸರ್ಕಲ್‌ನಿಂದ ಮಾಸ್ತಿಕಟ್ಟೆ ಜಂಕ್ಷನ್ ವರೆಗೆ ಬೃಹತ್ ಕಾಲ್ನಡಿಗೆ ಜಾಥಾ ಹಾಗೂ ಪ್ರತಿಭಟನೆ ಶನಿವಾರ ನಡೆಯಿತು.
ಎನ್.ಎಸ್.ಯು.ಐ ಜಿಲ್ಲಾಧ್ಯಕ್ಷ ಸುಹಾನ್ ಆಳ್ವ ಮಾತನಾಡಿ, ನೀಟ್ ಹಗರಣದ ನೇರ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕಿದೆ. ದೆಹಲಿಯಲ್ಲಿ ರ್ಯಾಪಿಡ್ ಪೊಲೀಸ್ ಫೋಸ್೯ ಬಳಸಿ ವಿದ್ಯಾರ್ಥಿಗಳಿಗೆ ನಡೆಸಿದ ಹಿಂಸಾಚಾರ ಖಂಡನೀಯ. ಪುನರ್ ನೀಟ್ ಪರೀಕ್ಷೆ ನಡೆಸದೇ ಇದ್ದಲ್ಲಿ ಕೇಂದ್ರ ಸರಕಾರದ ಎಲ್ಲಾ ಕಚೇರಿಗಳ ಮುಂದೆ ನಿಂತು ಪ್ರತಿಭಟಿಸಲಿದ್ದೇವೆ ಎಂದರು.
ಕಾಂಗ್ರೆಸ್ ಮುಖಂಡ ಯು.ಬಿ. ಸಲೀಂ ಮಾತನಾಡಿ, ನೀಟ್ ಅವ್ಯವಹಾರ ವಿರುದ್ಧ ನಾವು ಪ್ರತಿಭಟಿಸದೇ ಇದ್ದಲ್ಲಿ ಸಂವಿಧಾನ ಇನ್ನಷ್ಟು ಹದಗೆಟ್ಟು ಹೋಗುವುದರಲ್ಲಿ ಸಂಶಯವಿಲ್ಲ. ಮಂಗಳೂರು ವಿ.ವಿ ಕಟ್ಟಿದವರು ಯಾರು ಎಂಬುದು ಸಂಸದರಿಗೆ ಗೊತ್ತಿಲ್ಲ. ವೀರಪ್ಪ ಮೊಯ್ಲಿ ನೇತೃತ್ವದಲ್ಲಿ ವಿ.ವಿ. ಸ್ಥಾಪನೆಯಾಗಿದೆ. ಇದರಲ್ಲಿ ಮಾಜಿ ಶಾಸಕ ದಿ. ಯುಟಿ ಫರೀದ್ ಕೂಡ ಮುತುವರ್ಜಿ ವಹಿಸಿದ್ದರು.ಇದರಿಂದ ಇಡೀ ರಾಜ್ಯ ಹಾಗೂ ಕೇರಳದ ವಿದ್ಯಾರ್ಥಿಗಳು ಕ್ಷೇತ್ರಕ್ಕೆ ಬರುವಂತಾಯಿತು. ಕಡುಬಡವರು, ದಲಿತರು, ಅಲ್ಪಸಂಖ್ಯಾತರು, ಆರ್ಥಿಕವಾಗಿ ಹಿಂದುಳಿದವರಿಗೆ ಸಿಇಟಿ ಸ್ಥಾಪಿಸಿ ಕಲಿಯಲು ಅವಕಾಶ ಮಾಡಿಕೊಟ್ಟರು. ಉನ್ನತ ವ್ಯಾಸಂಗ ಪಡೆದು ದೇಶ ವಿದೇಶದಲ್ಲಿ ಉನ್ನತ ಹುದ್ದೆಗಳನ್ನು ಪಡೆಯುವಂತಾಗಿದೆ. ಉತ್ತರಭಾರತ ರಾಜ್ಯದಲ್ಲಿರುವಂತಹ ವಿದ್ಯಾರ್ಥಿಗಳನ್ನು ತಂದು ನಮ್ಮ ಅವಕಾಶ ಕಳಚಿ ಅವರಿಗೆ ಕಲಿಯುವಂತೆ ಮಾಡಲಾಗಿದೆ ಎಂದರು.
ಉಳ್ಳಾಲ ನಗರ ಯೂತ್ ಕಾಂಗ್ರೆಸ್ ಅಧ್ಯಕ್ಷ ರಶೀದ್ ಕೋಡಿ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗದ ಅಧ್ಯಕ್ಷ ದೀಪಕ್ ಪಿಲಾರ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಕಿಶಾನ್ ಘಟಕದ ಅಧ್ಯಕ್ಷ ಪುರುಷೋತ್ತಮ್ ಶೆಟ್ಟಿ ಪಿಲಾರ್, ಮನ್ಸೂರ್ ಮಂಚಿಲ, ಮಂಗಳೂರು ಯುನಿವರ್ಸಿಟಿ ಸಿಂಡಿಕೇಟ್ ಸದಸ್ಯ ಸವಾದ್ ಸುಳ್ಯ, ಎನ್.ಎಸ್.ಯು.ಐ ಜಿಲ್ಲಾಧ್ಯಕ್ಷ ಸುಹಾನ್ ಆಳ್ವ, ಜಿಲ್ಲಾ ಕಾರ್ಯದರ್ಶಿ ಜೆ.ಎಚ್ ರಾಹಿಲ್, ಸದಸ್ಯರಾದ, ವಿಶಾಲ್, ಶಾಹಿಲ್ ಮಂಚಿಲ, ದರ್ಶನ್, ಶಾಕೀರ್ ಉಳ್ಳಾಲ್, ಜಯನ್ ಉಳ್ಳಾಲ್, ಉಳ್ಳಾಲ ನಗರ ಸಭೆ ಸದಸ್ಯರಾದ ಅಯ್ಯೂಬ್ ಮಂಚಿಲ, ಅಝೀಝ್, ಮಾಜಿ ಸದಸ್ಯ ಉಸ್ಮಾನ್ ಕಲ್ಲಾಪು, ಕಾಂಗ್ರೆಸ್ ಮುಖಂಡ ಯು.ಬಿ ಸಲೀಮ್, ಯೂತ್ ಕಾಂಗ್ರೆಸ್ ಪ್ರಮುಖರಾದ ಮುಸ್ತಫ ಕಡಪರ, ಅಶ್ರಫ್ ಉಳ್ಳಾಲ್, ತೌಹೀದ್ ಕಲ್ಲಾಪು, ನಝೀರ್ ಬಾರ್ಲಿ, ಬಶೀರ್ ಕೊಳಂಗರೆ, ಸಾಧಿಕ್ ಕಲ್ಲಾಪು ಮತ್ತಿತರರು ಉಪಸ್ಥಿತರಿದ್ದರು.
ಎನ್.ಎಸ್ ಯು.ಐ ಸದಸ್ಯ ಶಾಹಿಲ್ ಮಂಚಿಲ ಪ್ರಾಸ್ತವಿಕವಾಗಿ ಮಾತನಾಡಿ, ಸ್ವಾಗತಿಸಿದರು.