
Vitla: ಲಿಫ್ಟ್‌ನಲ್ಲಿ ಸಿಲುಕಿದ ವಿದ್ಯಾರ್ಥಿಗಳು
Monday, July 1, 2024
ವಿಟ್ಲ: ವಿಟ್ಲದ ಪುತ್ತೂರು ರಸ್ತೆಯಲ್ಲಿರುವ ಬಹುಮಹಡಿ ಕಟ್ಟಡದಲ್ಲಿ ಲಿಫ್ಟ್ ಹಾಳಾಗಿ ವಿದ್ಯಾರ್ಥಿಗಳು ಸಂಕಷ್ಟಕ್ಕೊಳಗಾದ ಘಟನೆ ಇಂದು ನಡೆದಿದೆ.
ದಿನನಿತ್ಯದಂತೆ ಲಿಫ್ಟ್‌ನಲ್ಲಿ ಮೇಲಿನ ಕಟ್ಟಡಕ್ಕೆ ವಸ್ತುಗಳ ಖರೀದಿಗಾಗಿ ಹೋಗುತ್ತಿದೆನ್ನಲಾದ ವಿದ್ಯಾರ್ಥಿಗಳು ಹಠಾತ್ತನೆ ಲಿಫ್ಟ್ ಹಾಳಾದ್ದರಿಂದಾಗಿ ಪೇಚಿಗೆ ಸಿಲುಕ್ಕಿದ್ದರು. ಉಸಿರುಗಟ್ಟುವ ಪರಿಸ್ಥಿತಿ ನಿರ್ಮಾಣವಾಯಿತು. ಮೊಬೈಲ್‌ನಿಂದ ವಿದ್ಯಾರ್ಥಿಗಳು ಹೆತ್ತವರಿಗೆ ಮಾಹಿತಿ ನೀಡಿದರು. ತಕ್ಷಣ ಸಂಬಂಧಪಟ್ಟವರು ಸ್ಥಳಕ್ಕೆ ಬಂದು ಸಹಕರಿಸಿದರು.