
Mangalore: ಸಿಬ್ಬಂದಿಗಳಲ್ಲಿ ದಕ್ಷತೆ, ಪ್ರಾಮಾಣಿಕ ಸೇವೆ ಅಗತ್ಯ: ಡಾ. ಎಂ.ಎನ್. ರಾಜೇಂದ್ರ ಕುಮಾರ್
ಮಂಗಳೂರು: ಸಿಬ್ಬಂದಿಗಳು ದಕ್ಷತೆ ಹಾಗೂ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಬೇಕು .ಅದರಲ್ಲೂ ಬ್ಯಾಂಕ್ ಸಿಬ್ಬಂದಿಗಳ ಸೇವೆ ಇತರರಿಗೆ ಮಾದರಿಯಾಗಿರಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಉಪ ಮಹಾಪ್ರಬಂಧಕ ಜೆ. ಜೀವನ್ ಶೆಟ್ಟಿ, ಹಿರಿಯ ಬ್ಯಾಂಕ್ ನಿರೀಕ್ಷಕಿ ಸಂಧ್ಯಾ ಹಾಗೂ ಸಿಬ್ಬಂದಿ ಕೊರಗಪ್ಪ ನಾಯ್ಕ್ ಅವರು ನಿವೃತ್ತರಾದ ಹಿನ್ನಲೆಯಲ್ಲಿ ಬ್ಯಾಂಕ್ ಸಭಾಂಗಣದಲ್ಲಿ ಇಂದು ನಡೆದ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ನಿವೃತ್ತರಾಗುತ್ತಿರುವ ಉಪ ಮಹಾಪ್ರಬಂಧಕರಾದ ಜೀವನ್ ಶೆಟ್ಟಿ, ಹಿರಿಯ ಬ್ಯಾಂಕ್ ನಿರೀಕ್ಷಕಿ ಸಂಧ್ಯಾ ಹಾಗೂ ಸಿಬ್ಬಂದಿ ಕೊರಗಪ್ಪ ನಾಯ್ಕ್ ಅವರಿಗೆ ಶಾಲು, ಹಾರ, ಫಲವಸ್ತು, ನೆನಪಿನ ಕಾಣಿಕೆ ನೀಡಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು ಗೌರವಿಸಿ, ಈ ಮೂವರ ನಿವೃತ್ತಿ ಜೀವನ ಸುಖ ಶಾಂತಿ ನೆಮ್ಮದಿಯಿಂದ ಇರಲಿ ಎಂದು ಶುಭ ಆಶಿಸಿದರು. ಬ್ಯಾಂಕ್ನ ನೌಕರರ ಒಕ್ಕೂಟದಿಂದಲೂ ಈ ಮೂವರಿಗೆ ಅಭಿನಂದನೆ ಸಲ್ಲಿಸಲಾಯಿತು.
ಬ್ಯಾಂಕಿನ ಉಪಾಧ್ಯಕ್ಷರಾದ ವಿನಯಕುಮಾರ್ ಸೂರಿಂಜೆ, ನಿರ್ದೆಶಕರುಗಳಾದ ಶಶಿಕುಮಾರ್ ರೈ ಬಾಲ್ಯೋಟ್ಟು, ದೇವಿಪ್ರಸಾದ್ ಶೆಟ್ಟಿ ಬೆಳಪು, ಎಸ್.ಬಿ.ಜಯರಾಮ್ ರೈ, ಮೋನಪ್ಪ ಶೆಟ್ಟಿ ಎಕ್ಕಾರು, ಕೆ. ಜೈರಾಜ್ ಬಿ ರೈ, ಹರಿಶ್ಚಂದ್ರ, ಕುಶಾಲಪ್ಪ ಗೌಡ ಹಾಗೂ ಬ್ಯಾಂಕಿನ ಅಧಿಕಾರಿಗಳು ಉಪಸ್ಥಿತರಿದ್ದರು.
ಬ್ಯಾಂಕಿನ ಉಪಮಹಾಪ್ರಬಂಧಕ ನಿತ್ಯಾನಂದ ಸೇರಿಗಾರ್ ಸ್ವಾಗತಿಸಿ, ಕೊನೆಯಲ್ಲಿ ವಂದಿಸಿದರು.