ಗರ್ಭಿಣಿ ಮಹಿಳೆ ಆತ್ಮಹತ್ಯೆ

ಗರ್ಭಿಣಿ ಮಹಿಳೆ ಆತ್ಮಹತ್ಯೆ

ಕಾಸರಗೋಡು: ಮೂರು ತಿಂಗಳ ಗರ್ಭಿಣಿಯೊಬ್ಬರು ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಯ್ಯಾರ್ ಕನ್ನಟಿಪಾರೆ ಶಾಂತಿಯೋಡು ಎಂಬಲ್ಲಿ ನಡೆದಿದೆ. ಶಾಂತಿಯೋಡಿನ ಜನಾರ್ಧನ ಅವರ ಪತ್ನಿ ವಿಜೇತ (32) ಮೃತಪಟ್ಟವರು.

ವಿಜೇತ ಪತಿ ಜನಾರ್ಧನ ಅವರು ರವಿವಾರ ಬೆಳಿಗ್ಗೆ ಉಳ್ಳಾಲದ ಸಂಬಂಧಿಕರ ಮನೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ವಿಜೇತಾ ಮಾತ್ರ ಮನೆಯಲ್ಲಿದ್ದರು.

ಪತಿ ಸಂಜೆ ಮನೆಗೆ ಮರಳಿ ಬಂದಾಗ ಕೋಣೆಯ ಬಾಗಿಲು ಒಳಗಿನಿಂದ ಚಿಲಕ ಹಾಕಿದ ಸ್ಥಿತಿಯಲ್ಲಿತ್ತು ಎನ್ನಲಾಗಿದೆ. ಬಾಗಿಲು ಒಡೆದು ಗಮನಿಸಿದಾಗ ಫ್ಯಾನಿಗೆ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕುಂಬಳೆ ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ. ವಿಜೇತ ಅವರು ವಾಮಂಜೂರು ಪಿಲಿಕುಳ ನಿವಾಸಿಯಾಗಿದ್ದು, ಒಂದೂವರೆ ವರ್ಷಗಳ ಹಿಂದೆ ಇವರಿಗೆ ವಿವಾಹವಾಗಿತ್ತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article