‘ರಾಜ್ಯಪಾಲರ ಪಕ್ಷಪಾತಿ ನಡೆ ರಾಜ್ಯಕ್ಕೆ ಗೊತ್ತಾಗಿದೆ’: ಸಚಿವ ದಿನೇಶ್ ಗುಂಡೂರಾವ್

‘ರಾಜ್ಯಪಾಲರ ಪಕ್ಷಪಾತಿ ನಡೆ ರಾಜ್ಯಕ್ಕೆ ಗೊತ್ತಾಗಿದೆ’: ಸಚಿವ ದಿನೇಶ್ ಗುಂಡೂರಾವ್


ಮಂಗಳೂರು: ಮುಖ್ಯಮಂತ್ರಿ ವಿರುದ್ಧ ರಾಜ್ಯಪಾಲರು ಹೊರಡಿಸಿದ ಪ್ರಾಸಿಕ್ಯೂಶನ್ ವಿಚಾರವನ್ನು ನ್ಯಾಯಾಲಯ ತೀರ್ಮಾನಿಸುತ್ತದೆ. ಆದರೆ ರಾಜ್ಯಪಾಲರ ಪಕ್ಷಪಾತಿ ನಡೆ ಇಡೀ ರಾಜ್ಯಕ್ಕೆ ಗೊತ್ತಾಗಿದೆ ಎಂದು ದ. ಕ. ಜಿಲ್ಲಾ ಉಸ್ತುವಾರಿಯೂ ಆಗಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಮೈಸೂರು ಮೂಡಾ ಹಗರಣಕ್ಕೆ ಸಂಬಂಧಿಸಿ ನ್ಯಾಯಾಲಯ ಆದೇಶ ಕಾಯ್ದಿರಿಸಿದ ಕುರಿತು ಮಂಗಳೂರಲ್ಲಿ ಶುಕ್ರವಾರ ಸುದ್ದಿಗಾರರಲ್ಲಿ ಪ್ರತಿಕ್ರಿಯಿಸಿದ ಅವರು, ರಾಜ್ಯಪಾಲರು ಮುಖ್ಯಮಂತ್ರಿಗಳಿಗೆ 12 ಗಂಟೆಯ ಒಳಗೆ ತರಾತುರಿಯಲ್ಲಿ ಶೋಕಾಸ್ ನೋಟಿಸ್ ನೀಡಿದ್ದಾರೆ. ಮುಖ್ಯಮಂತ್ರಿಗಳು ಯಾವುದೇ ಅಧಿಕಾರ ದುರುಪಯೋಗ ಮಾಡಿಲ್ಲ ಭ್ರಷ್ಟಾಚಾರ ಮಾಡಿಲ್ಲ ಎಂದರು.

ವಕೀಲರು ಯಾವ ರೀತಿ ವಾದ ಮಾಡುತ್ತಿದ್ದಾರೆ ಎಂದು ನಾನು ನೋಡಿಲ್ಲ. ಆದರೆ ರಾಜ್ಯಪಾಲರ ನಡೆ ಸರಿ ಇಲ್ಲ ಎಂದಾದರೆ ಆದೇಶ ತಪ್ಪು. ರಾಜ್ಯಪಾಲರು ಯಾವ ರೀತಿ ಈ ತೀರ್ಮಾನಕ್ಕೆ

ಬಂದ್ರು, ಅವರ ಉದ್ದೇಶವೇನೂ ಎಲ್ಲವೂ ಒಂದು ಷಡ್ಯಂತ್ರ. ರಾಜ್ಯಪಾಲರು ಸರ್ಕಾರದ ಸಾಂವಿಧಾನಿಕ ಮುಖ್ಯಸ್ಥ. ಮುಖ್ಯಸ್ಥ ಸರ್ಕಾರದ ವಿರುದ್ಧವೇ ಷಡ್ಯಂತ್ರದಲ್ಲಿ ಭಾಗಿಯಾದರೆ ಏನೆಂದು ಕರೆಯೋದು? ಇದು ರಾಜ್ಯಕ್ಕೆ ಮಾಡಿದ ದ್ರೋಹ, ಪ್ರಜಾಪ್ರಭುತ್ವ ವ್ಯವಸ್ಥೆಗೆ ದ್ರೋಹ ಮಾಡಿದ್ದಾರೆ ಎಂದರು.

ಸಿದ್ದರಾಮಯ್ಯನವರು ಯಡಿಯೂರಪ್ಪ ಅಲ್ಲ, ಯಡಿಯೂರಪ್ಪ ಬೇರೆ ಸಿದ್ದರಾಮಯ್ಯ ಬೇರೆ. ಅವರಿಗೂ ಇವರಿಗೂ ತುಲನೆ ಮಾಡುವುದು ಬೇಡ. ಯಡಿಯೂರಪ್ಪನವರು ಏನೇನು ಮಾಡಿದರು.

ಕಾರಣಕ್ಕೆ ರಾಜೀನಾಮೆ ಕೊಟ್ಟರು ಎಂದು ಬಿಜೆಪಿಯವರು ಹೇಳಲಿ. ಸಿದ್ದರಾಮಯ್ಯನವರ ಬಗ್ಗೆ ಮಾತನಾಡಲು ಬಿಜೆಪಿಗರಿಗೆ ಯಾವುದೇ ನೈತಿಕತೆ ಇಲ್ಲ ಎಂದರು.

ಜಿಂದಾಲ್‌ಗೆ ಭೂಮಿ ಹಸ್ತಾಂತರ ಬಗ್ಗೆ ಹಿಂದಿನ ಸರ್ಕಾರದ ಕ್ಯಾಬಿನೆಟ್‌ನಲ್ಲಿ  ಮಂಜೂರಾತಿ ನೀಡಲಾಗಿದೆ. ಬಸವರಾಜ ಬೊಮ್ಮಾಯಿ ಕ್ಯಾಬಿನೆಟ್‌ನಲ್ಲಿ ಯಾಕೆ ಅನುಮತಿ ನೀಡಿದ್ದಾರೆ? ಈ ಬಗ್ಗೆ ನಮ್ಮ ಸರ್ಕಾರ ಇದ್ದಾಗಲೂ ಚರ್ಚೆ ಆಗಿತ್ತು. ಆಗ ಯಾವುದೇ ತೀರ್ಮಾನ ತಗೊಂಡಿಲ್ಲ. ಎಷ್ಟೋ ದಶಕದ ಹಿಂದೆ ಜಮೀನು ಸ್ವಾಧೀನ ಆಗಿದೆ. ಇವತ್ತಿನ ಬೆಲೆಗೂ ಅವತ್ತಿನ ಬೆಲೆಗೂ ಹೋಲಿಕೆ ಮಾಡಲು ಆಗುವುದಿಲ್ಲ ಎಂದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬಕ್ಕೆ ಜಾಗ ನೀಡಿರುವ ಬಗ್ಗೆ ಸಚಿವ ಎಂ.ಬಿ ಪಾಟೀಲ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಯಾವ ಆಧಾರದಲ್ಲಿ ಜಾಗ ಕೊಟ್ಟಿದ್ದಾರೆ, ಅದರ ಉದ್ದೇಶವೇನೆಂದು ಹೇಳಿದ್ದಾರೆ. ಕಡಿಮೆ ಬೆಲೆಗೆ ಅಥವಾ ರಿಯಾಯಿತಿ ಬೆಲೆ ನೀಡಿಲ್ಲ ಎಂದು ತಿಳಿಸಿದರು.

ತೆಗೆದುಕೊಂಡ ಉದ್ದೇಶಕ್ಕೆ ಉಪಯೋಗಿಸಿದರೆ ಭೂಮಿ ಉಳಿಯುತ್ತದೆ. ಆರ್‌ಎಸ್‌ಎಸ್ನ ಅಂಗಸಂಸ್ಥೆ ರಾಷ್ಟ್ರೋತ್ಥಾನ ಪರಿಷತ್, ಚಾಣಾಕ್ಯ ಯೂನಿವರ್ಸಿಟಿಗೆ ಕಡಿಮೆ ಬೆಲೆಗೆ ಬೆಲೆ ಬಾಳುವ ಭೂಮಿ ನೀಡಲಾಗಿದೆ. ಇಲ್ಲಿ ಯಾವುದೇ ರೀತಿಯ ಕಡಿಮೆ ಬೆಲೆ ಮಾಡಿಲ್ಲ. ಕೆದಕುತ್ತಾ ಹೋದರೆ ಬಿಜೆಪಿಗರದ್ದೇ ನೂರು ಹಗರಣ ಬೆಳಕಿಗೆ ಬರುತ್ತದೆ. ನೀವು ಮಾಡಬಾರದೆಲ್ಲ ಮಾಡಿದ್ದೀರಿ. ಯಡಿಯೂರಪ್ಪ ಅವರು ಟ್ರಸ್ಟ್ಗೆ ಜಿಂದಾಲ್ನಿಂದ ದುಡ್ಡು ತಗೊಂಡಿಲ್ಲವೇ? ಮುಖ್ಯಮಂತ್ರಿಯಾಗಿ ಜಿಂದಾಲ್ನಿಂದ ಚೆಕ್ ಮೂಲಕ ಹಣ ತಗೊಂಡಿದ್ದರು. ಯಾವ ಕಾರಣಕ್ಕಾಗಿ ಕೋಟಿ ಕೋಟಿ ಮೊತ್ತವನ್ನು ಜಿಂದಾಲ್ ಅವರು ಕೊಟ್ಟಿದ್ದಾರೆ? ಜಿಂದಾಲ್‌ನಿಂದ 30- 40 ಕೋಟಿ ರು. ತೆಗೆದುಕೊಂಡಿದ್ದಾರೆ. ಚೆಕ್ ಮೂಲಕ ನೇರವಾಗಿ ಹಣ ಸ್ವೀಕರಿಸಿದ್ದಾರೆ. ಇವರು ಮೈನಿಂಗ್ಗೆ ಅನುಮತಿ ಕೊಟ್ಟಿದ್ದರು. ಯಾವ ಕಾರಣಕ್ಕೆ ಹಣ ಕೊಟ್ಟಿದ್ದಾರೆ ಎಂಬುದು ಸ್ಪಷ್ಟವಾಯ್ತಲ್ಲ. ಬಿಜೆಪಿಯವರು ಅವರ ಕಾಲದಲ್ಲಿ ಎಲ್ಲ ಹಾಳು ಮಾಡಿ ಕೆಟ್ಟ ಕೆಲಸ ಮಾಡಿ ಹೋಗಿದ್ದಾರೆ. ಈಗ ನಮ್ಮ ಸರ್ಕಾರಕ್ಕೆ ಕೆಟ್ಟ ಹೆಸರು ತರಬೇಕೆಂದು ಏನೇನೋ ಮಾಡುತ್ತಿದ್ದಾರೆ. ಇದು ತಿರುಗುಬಾಣ ನಿಮ್ಮ(ಬಿಜೆಪಿ) ಮೇಲೆ ಆಗುತ್ತೆ ಎಂದರು.

ಮಾಜಿ ಸಚಿವ ಮುರುಗೇಶ್ ನಿರಾಣಿಯವರು ಇಂಡಸ್ಟ್ರಿಯಲ್ ಭೂಮಿ ಖರೀದಿಸಿ ಇಂಟರ್‌ನ್ಯಾಷನಲ್ ಸ್ಕೂಲ್ ಮಾಡಿದ್ದಾರೆ. ಇನ್ನು ಇಂತಹ ಎಷ್ಟೆಷ್ಟು ಕೇಸ್ ಇದೆ ಎಂದು ಗೊತ್ತಿಲ್ಲ. ಇನ್ನೊಬ್ಬರನ್ನು ದೂಷಿಸುವ ಮೊದಲು ನೀವು ಸರಿ ಇರಬೇಕು. ನಿಜವಾಗಿಯೂ ತಪ್ಪಾಗಿದ್ದರೆ ಒಪ್ಪಿಕೊಳ್ಳೋಣ. ಖರ್ಗೆಯವರ ಟ್ರಸ್ಟ್ ಅವರು ತಪ್ಪು ಮಾಡಿದ್ರೆ ಅದನ್ನು ಹೇಳಲಿ. ಅದೇನೂ ಇಲ್ಲದೆ ಮಾತನಾಡುವುದು ತಪ್ಪು. ಹಾಗಾದರೆ ಯಾರು ಯಾವುದೇ ಉದ್ದಿಮೆ ಕೆಲಸ ಕಾರ್ಯ ಮಾಡಬಾರದಾ? ಯಾರು, ಎಲ್ಲಿ ಪ್ರಭಾವ ಬೀರಿದ್ದಾರೆ ಎನ್ನುವದನ್ನು ಹೇಳಲಿ. ಎಷ್ಟೋ ಮಂದಿ ರಾಜಕಾರಣಿಗಳು ಸಿ.ಎ ಸೈಟ್ ಪಡೆದಿದ್ದಾರೆ. ಸ್ಕೂಲ್, ಚೌಟ್ರಿಗಳನ್ನು ಕಟ್ಟಿದ್ದಾರೆ. ಸರಿಯಾಗಿ ಉಪಯೋಗ ಮಾಡಿದರೆ ಯಾವುದೇ ತಪ್ಪಿಲ್ಲ ಎಂದರು.

ಗ್ಯಾರಂಟಿ ದುರುಪಯೋಗ...:

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಸೇರಿದಂತೆ ಸರ್ಕಾರದ ಯಾವುದೇ ಯೋಜನೆಗಳು ಬಡವರು, ಶೋಷಿತರ ಉದ್ಧಾರಕ್ಕಾಗಿ ಹೊರತು ಶ್ರೀಮಂತರಿಗಲ್ಲ. ಗ್ಯಾರಂಟಿ ಯೋಜನೆಗಳನ್ನು ಶ್ರೀಮಂತರು ಪಡೆಯುತ್ತಿದ್ದು, ಅದಕ್ಕೆ ನಿಯಂತ್ರಣ ಹಾಕುವ ನಿಟ್ಟಿನಲ್ಲಿ ಚಿಂತನೆ ನಡೆಸುತ್ತಿದ್ದೇವೆ ಎಂದು ರಾಜ್ಯ ಆರೋಗ್ಯ ಸಚಿವ, ದ.ಕ. ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಮಂಗಳೂರಲ್ಲಿ ಶುಕ್ರವಾರ ಸುದ್ದಿಗಾರರಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆ ನಿಜವಾಗಿಯೂ ಯಾರು ಕಷ್ಟದಲ್ಲಿದ್ದಾರೆ, ಯಾರಿಗೆ ಅಗತ್ಯವಿದೆ ಅಂತಹ ಬಡವರಿಗೆ ತಲುಪಬೇಕು. ಫಲಾನುಭವಿಗಳಿಗೆ ಯೋಜನೆ ತಲುಪುವಲ್ಲಿ ಅನ್ಯಾಯವಾಗಬಾರದು. ಅಗತ್ಯವಿಲ್ಲದವರಿಗೆ ಕೊಟ್ಟು ಪ್ರಯೋಜನವಿಲ್ಲ ಎಂದರು.

ದಾವಣಗೆರೆಯಲ್ಲಿ ಕಾಲರಾ ಪ್ರಕರಣದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅಲ್ಲಿ ಆಸ್ಪತ್ರೆ ವ್ಯವಸ್ಥೆ ಚೆನ್ನಾಗಿದೆ. ಸ್ಥಳೀಯಾಡಳಿತ ಜತೆ ಈ ಬಗ್ಗೆ ಮತನಾಡುತ್ತೇನೆ. ಚಿಕಿತ್ಸೆಗೆ ಬೇಕಾದ ವ್ಯವಸ್ಥೆಯನ್ನು ಇಲಾಖೆ ಮಾಡಲಿದೆ. ಪ್ರಕರಣಕ್ಕೆ ಸಂಬಂಧಿಸಿ ತಪಾಸಣೆ ನಡೆಸಲಾಗುತ್ತಿದ್ದು, ಕಲುಷಿತ ನೀರಾಗಿದ್ದರೆ ಸರಿಪಡಿಸಲಾಗುವುದು ಎಂದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article