
ಮಹಾರಾಷ್ಟ್ರ ಚುನಾವಣಾ ವೀಕ್ಷಕರಾಗಿ ರಮಾನಾಥ ರೈ ನೇಮಕ
Tuesday, October 29, 2024
ಬಂಟ್ವಾಳ: ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಹಿನ್ನಲೆಯಲ್ಲಿ ಮುಂಬೈ ಸೌತ್ ಸೆಂಟ್ರಲ್ ಲೋಕಸಭಾ ವ್ಯಾಪ್ತಿಯ ವೀಕ್ಷಕರನ್ನಾಗಿ ಕರ್ನಾಟಕ ಸರಕಾರದ ಮಾಜಿ ಸಚಿವ ಬಿ. ರಮಾನಾಥರೈ ಅವರನ್ನು ನೇಮಕಗೊಳಿಸಿ ಎಐಸಿಸಿ ಆದೇಶಿಸಿದೆ.
ಈಗಾಗಲೇ ಮುಂಬೈಗೆ ತೆರಳಿರುವ ಮಾಜಿ ಸಚಿವ ರಮಾನಾಥ ರೈ ಅವರು ಮಹಾರಾಷ್ಟ್ರ ವಿಧಾನಸಭೆಗೆ ಧಾರಾವಿ ಕ್ಷೇತ್ರದಿಂದ ಮಹಾ ವಿಕಾಸ್ ಅಘಾಡಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜ್ಯೋತಿ ಏಕನಾಥ ಗಾಯಕ್‌ವಾಡ್ ಅವರೊಂದಿಗೆ ಚರ್ಚಿಸಿದರಲ್ಲದೆ ಗೆಲುವಿಗಾಗಿ ಮಾರ್ಗದರ್ಶನ, ಕಾರ್ಯತಂತ್ರ ರೂಪಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಪಿಯೂಸ್ ಎಲ್. ರೋಡ್ರಿಗಸ್, ದ.ಕ. ಜಿಲ್ಲಾ ಕಾಂಗ್ರೆಸ್ ಪ್ರ. ಕಾರ್ಯದರ್ಶಿ ಶಬೀರ್ ಹಾಗೂ ಪಕ್ಷದ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.