
ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳತನ
Tuesday, October 29, 2024
ಉಜಿರೆ: ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿದ ಕಳ್ಳರು, ನಗದು ಮತ್ತು ಚಿನ್ನಾವರಣ ಕಳವುಗೈದ ಘಟನೆ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಅಂಡಿಂಜೆ ಗ್ರಾಮದ ಪಾಂಡಿಲು ಹೊಸ ಮನೆಯ ಸುಜಾತ (51) ಎಂಬವರು ಅ.27ರಂದು ಮನೆಗೆ ಬೀಗ ಹಾಕಿ ಅಳಿಯೂರಿನಲ್ಲಿರುವ ತವರು ಮನೆಗೆ ತೆರಳಿದ್ದರು. ಅ. 28ರಂದು ಮಧ್ಯಾಹ್ನ ವಾಪಸು ಬಂದಾಗ ಮನೆಯ ಬಾಗಿಲಿನ ಬೀಗ ಒಡೆದಿದ್ದು ಕಂಡುಬಂದಿದೆ. ಹಾಗೂ ಕಪಾಟಿನಲ್ಲಿದ್ದ 25,000 ರೂ. ನಗದು ಹಾಗೂ ಐದು ಗ್ರಾಂ ತೂಕದ ಚಿನ್ನದ ಒಂದು ಜತೆ ಬೆಂಡೂಲೆ ಮತ್ತು ನಾಲ್ಕು ಗ್ರಾಂ ತೂಕದ ಉಂಗುರ ಕಳವಾಗಿರುವುದು ತಿಳಿದು ಬಂದಿದೆ.
ಕಳವಾದ ನಗದು ಹಾಗೂ ಸೊತ್ತುಗಳ ಮೌಲ್ಯ ಅಂದಾಜು 80000 ರೂ. ಆಗಿದ್ದು, ಕಳ್ಳತನ ಪ್ರಕರಣದ ಬಗ್ಗೆ ವೇಣೂರು ಠಾಣೆಗೆ ದೂರು ನೀಡಲಾಗಿದೆ.