
ವಂಚನೆ ಪ್ರಕರಣ: ನಿರೀಕ್ಷಣ ಜಾಮೀನು ತಿರಸ್ಕೃತ
Saturday, October 19, 2024
ಕಾಸರಗೋಡು: ಸರಕಾರಿ ಕಚೇರಿಗಳಲ್ಲಿ ಉದ್ಯೋಗ ದೊರಕಿಸಿಕೊಡುವುದಾಗಿ ನಂಬಿಸಿ ಹಲವರಿಂದ ಹಣ ಪಡೆದು ವಂಚಿಸಿದ ಪ್ರಕರಣದಲ್ಲಿ ಶೇಣಿ ಬಲ್ತಕಲ್ಲು ನಿವಾಸಿ ಸಚಿತಾ ರೈ (27) ಸಲ್ಲಿಸಿದ್ದ ನಿರೀಕ್ಷಣ ಜಾಮೀನು ಅರ್ಜಿಯನ್ನು ಕಾಸರಗೋಡು ಪ್ರಿನ್ಸಿಪಲ್ ಸೆಶನ್ಸ್ ನ್ಯಾಯಾಲಯ ತಿರಸ್ಕರಿಸಿದೆ.
ಬಾಡೂರು ಎಎಲ್ಪಿ ಶಾಲೆಯ ಅಧ್ಯಾಪಕಿ, ಡಿವೈಎಫ್‌ಐ ಮಾಜಿ ನೇತಾರೆಯಾದ ಸಚಿತಾ ರೈ, ಕೇಂದ್ರ ತೋಟಗಾರಿಕ ಬೆಳೆ ಸಂಶೋಧನ ಸಂಸ್ಥೆ (ಸಿಪಿಸಿಆರ್‌ಐ) ಸಹಿತ ವಿವಿಧ ಸರಕಾರಿ ಕಚೇರಿಗಳಲ್ಲಿ ಉದ್ಯೋಗದ ಭರವಸೆ ನೀಡಿ ಹಲವರಿಂದ ಹಣ ಪಡೆದು ವಂಚಿಸಿರುವುದಾಗಿ ವಿವಿಧ ಠಾಣೆಗಳಲ್ಲಿ ದೂರು ನೀಡಲಾಗಿತ್ತು.
ಕಿದೂರು ಪದಕ್ಕಲ್ನ ನಿಶ್ಚಿತಾ ಶೆಟ್ಟಿ ಅವರ ದೂರಿನಂತೆ ಕುಂಬಳೆ ಪೊಲೀಸರು ಮೊದಲು ಕೇಸು ದಾಖಲಿಸಿಕೊಂಡಿದ್ದರು. ಅನಂತರ ಸಚಿತಾ ರೈ ವಿರುದ್ಧ ಹಲವು ಠಾಣೆಗಳಲ್ಲಿ ವಂಚನೆ ಪ್ರಕರಣ ದಾಖಲಾಗಿತ್ತು.