
ಜನವರಿಯಲ್ಲಿ ಅಸ್ತ್ರ ಸ್ಟಾರ್ ಟಿ 12 ಕ್ರಿಕೆಟ್ ಉತ್ಸವ
ಮಂಗಳೂರು: ಆಲ್ ಇಂಡಿಯಾ ಮೆನ್ಸ್ ಆಂಡ್ ವುಮೆನ್ಸ್ ಸ್ಪೋರ್ಟ್ಸ್ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಜನವರಿಯಲ್ಲಿ ‘ಅಸ್ತ್ರಸ್ಟಾರ್ ಟಿ 12 ಕ್ರಿಕೆಟ್’ ಪಂದ್ಯಾಟವನ್ನು ಆಯೋಜಿಸಲಾಗುತ್ತಿದೆ ಎಂದು ಟ್ರಸ್ಟ್‌ನ ಮುಖ್ಯಸ್ಥ ಲಂಚುಲಲ್ ಕೆ.ಎಸ್. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಉತ್ಸವದಲ್ಲಿ ಮಹಿಳಾ ಸಮಾನತೆಗೆ ಪೂರಕವಾಗಿ ತಂಡದಲ್ಲಿ 9 ಮಂದಿ ಮಹಿಳೆಯರ ಜತೆಗೆ ಇಬ್ಬರು ಸ್ಟಾರ್ ಪುರುಷ ಕ್ರಿಕೆಟಿಗರು ಭಾಗವಹಿಸಲಿದ್ದಾರೆ. ಒಟ್ಟು 12 ತಂಡಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದರು.
ಟ್ರಸ್ಟ್ ವತಿಯಿಂದ ಅತ್ಲೆಟಿಕ್, ಕ್ರಿಕೆಟ್ ಸೇರಿದಂತೆ ದೇಶದ ಗ್ರಾಮೀಣ ಭಾಗಗಳಿಂದ ಆಯ್ದ ಕ್ರೀಡಾ ಪ್ರತಿಭೆಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆಸುವ ಉದ್ದೇಶ ಹೊಂದಲಾಗಿದ್ದು, ಕ್ರೀಡಾಪಟುಗಳಿಗೆ ಅಗತ್ಯ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ನಮ್ಮಲ್ಲಿ ವಿವಿಧ ಕ್ರೀಡೆಗಳಿಗೆ ಸಂಬಂಧಿಸಿ ಸಾಕಷ್ಟು ಪ್ರತಿಭೆಗಳಿದ್ದರೂ ಶಾಲೆ ಅಥವಾ ಕಾಲೇಜು ಹಂತದ ಬಳಿಕ ಕ್ರೀಡಾಪಟುಗಳು ಮೂಲ ಸೌಕರ್ಯದ ಕೊರತೆ, ಹಣಕಾಸಿನ ತೊಂದರೆಯಿಂದ ಮರೆಯಾಗುತ್ತಾರೆ. ಅಂತಹ ಕ್ರೀಡಾ ಪಟುಗಳನ್ನು ಶಾಲಾ ಹಂತದಿಂದಲೇ ಗುರುತಿಸಿ ಬೆಳೆಸುವುದು ಟ್ರಸ್ಟ್‌ನ ಉದ್ದೇಶವಾಗಿದೆ. ಅದರಲ್ಲೂ ಮಹಿಳಾ ಕ್ರೀಡಾ ಪ್ರತಿಭೆಗಳು ಹೇರಳವಾಗಿದ್ದು, ಅವರಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುವುದು. ವರ್ಷಕ್ಕೆ ಕನಿಷ್ಟ 20 ಕ್ರೀಡಾ ಪಟುಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆಸುವ ಉದ್ದೇಶದೊಂದಿಗೆ ಟ್ರಸ್ಟ್ ಕಾರ್ಯ ನಿರ್ವಹಿಸಲಿದೆ ಎಂದು ಟ್ರಸ್ಟ್‌ನ ಅಧ್ಯಕ್ಷ ಸಂದೀಪ್ ಪುರಂದರ ಶೆಟ್ಟಿ ಮಾಹಿತಿ ನೀಡಿದರು.
ಕೋಶಾಧಿಕಾರಿ ಮೋಹನ್‌ದಾಸ್, ಕಾರ್ಯದರ್ಶಿ ಚರಣ್‌ರಾಜ್ ಉಪಸ್ಥಿತರಿದ್ದರು.