ಲಾರಿ ತಡೆದು 1.64 ಲಕ್ಷ ರೂ. ದರೋಡೆ
Wednesday, October 16, 2024
ಮಂಗಳೂರು: ಲಾರಿ ತಡೆದು ಚಾಲಕನಿಗೆ ಚಾಕು ತೋರಿಸಿ ಬೆದರಿಕೆಯೊಡ್ಡಿ 1.64 ಲಕ್ಷ ರೂ. ದರೋಡೆ ಗೈದ ಘಟನೆ ಇಂದು ಮುಂಜಾನೆ ಕಾಸರಗೋಡು ಮಂಜೇಶ್ವರ ಪೈವಳಿಕೆ ಸಮೀಪದ ಅಟ್ಟೆಗೋಳಿಯಲ್ಲಿ ನಡೆದಿದೆ.
ಮೀನು ತರಲು ತೆರಳುತ್ತಿದ್ದಾಗ ಬೈಕ್ ನಲ್ಲಿ ಬಂದ ಇಬ್ಬರು ಲಾರಿ ಚಾಲಕ ಯೂಸಫ್ ನನ್ನು ತಡೆದು ಚಾಕು ತೋರಿಸಿ ಹಣವನ್ನು ದರೋಡೆ ಮಾಡಿರುವುದಾಗಿ ಮಂಜೇಶ್ವರ ಪೊಲೀಸ್ ಠಾಣೆಗೆ ದೂರು ನೀಡಲಾಗಿದ ಪೊಲೀಸರು ತನಿಖೆ ಆರಂಭಿಸಿದ್ದು, ಸಿಸಿ ಟಿವಿ ಕ್ಯಾಮರಾ ತಪಾಸಣೆ ನಡೆಸಿದ್ದಾರೆ.