ತನ್ನೊಂದಿಗೆ ಬರದಿದ್ದರೆ 24 ತುಂಡು ಮಾಡಿ ಬಿಸಾಡುವೆ ಮುಸ್ಲಿಂ ಯುವಕನ ಬೆದರಿಕೆಗೆ ಹಿಂದೂ ಯುವತಿ ಆತ್ಮಹತ್ಯೆ ಯತ್ನ
Friday, October 25, 2024
ಮಂಗಳೂರು: ಸುರತ್ಕಲ್ ಇಡ್ಯಾ ನಿವಾಸಿ ಶಾರಿಕ್ ನೂರ್‌ಜಹಾನ್ ಎಂಬಾತ ಹಿಂದೂ ಯುವತಿಯೊಬ್ಬಳಿಗೆ ಫೇಸ್‌ಬುಕ್ ಮೆಸೆಂಜರ್ ಮೂಲಕ ಅಶ್ಲೀಲ ಮೆಸೇಜ್ ಹಾಗೂ ತನ್ನೊಂದಿಗೆ ಬರದಿದ್ದರೆ 24 ತುಂಡು ಮಾಡಿ ಬಿಸಾಡುವೆ ಎಂದು ಬೆದರಿಕೆ ಹಾಕಿದ ಯುವಕನ ವಿರುದ್ಧ ಕ್ಷಿಪ್ರ ಕ್ರಮವನ್ನು ಪೊಲೀಸರು ಕೈಗೊಳ್ಳದೆ ಇದ್ದ ಪರಿಣಾಮ ಸಂತ್ರಸ್ತ ಯುವತಿ ನಿದ್ರೆ ಮಾತ್ರೆ ತೆಗೆದುಕೊಂಡು ಆತ್ಮಹತ್ಯೆಗೆ ಯತ್ನ ಮಾಡಿದ್ದಾಳೆ.
‘ಒಬ್ಬ ಮುಸ್ಲಿಮನ ಕೈಯ್ಯಲ್ಲಿ ಅತ್ಯಾಚಾರವಾಗಿ ಸಾಯುವ ಬದಲು ಈಗಲೇ ಸಾಯುತ್ತೇನೆ. ಪೊಲೀಸರಿಗೆ ದೂರು ಕೊಟ್ಟರೂ ಯಾವುದೇ ಪ್ರಯೋಜನ ಆಗಿಲ್ಲ. ಶಾರೀಕ್ ಹಾಗೂ ನೂರ್‌ಜಹಾನ್ ಇಬ್ಬರನ್ನೂ ಬಿಡಬಾರದು" ಎಂದು ಡೆತ್‌ನೋಟ್ ನಲ್ಲಿ ಹೆಸರು ಉಲ್ಲೇಖಿಸಿ ಆತ್ಮಹತ್ಯೆ ಯತ್ನಿಸಿದ್ದಾಳೆ ಎಂದು ತಿಳಿದುಬಂದಿದೆ. ಆಕೆಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.