ಅ.28 ರಂದು ಎಸ್‌ಸಿಡಿಸಿಸಿ ಬ್ಯಾಂಕ್ ಸಾಬ್ರಕಟ್ಟೆ ಶಾಖೆಯ ಸ್ಥಳಾಂತರ ಹಾಗೂ ಎ.ಟಿ.ಎಂ. ಉದ್ಘಾಟನೆ

ಅ.28 ರಂದು ಎಸ್‌ಸಿಡಿಸಿಸಿ ಬ್ಯಾಂಕ್ ಸಾಬ್ರಕಟ್ಟೆ ಶಾಖೆಯ ಸ್ಥಳಾಂತರ ಹಾಗೂ ಎ.ಟಿ.ಎಂ. ಉದ್ಘಾಟನೆ

ಮಂಗಳೂರು: ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲಿ ಗಣನೀಯ ಪ್ರಗತಿಯನ್ನು ಕಂಡಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ 110 ವರ್ಷಗಳ ಸಾರ್ಥಕ ಸೇವೆಯ ಇತಿಹಾಸವನ್ನು ಹೊಂದಿದೆ. 1914ರಲ್ಲಿ ಪುತ್ತೂರುನಲ್ಲಿ ದಿ.ಮೊಳಹಳ್ಳಿ ಶಿವರಾವ್ ಅವರ ಮಾರ್ಗದರ್ಶನದಲ್ಲಿ ಸ್ಥಾಪನೆಯಾದ ಈ ಬ್ಯಾಂಕ್ ಪ್ರಸ್ತುತ 113 ಶಾಖೆಗಳನ್ನು ಹೊಂದಿದೆ. ಡಾ. ಎಂ. ಎನ್. ರಾಜೇಂದ್ರ ಕುಮಾರ್ ಸಮರ್ಥ ಅಧ್ಯಕ್ಷತೆಯಲ್ಲಿ ಸರ್ವಾಂಗೀಣ ಅಭಿವೃದ್ಧಿಯತ್ತ ಸಾಗುತ್ತಿರುವ ಎಸ್‌ಸಿಡಿಸಿಸಿ ಬ್ಯಾಂಕ್ ಗ್ರಾಹಕರ ಅವಶ್ಯಕತೆಗೆ ಸದಾ ಸ್ಪಂದಿಸುತ್ತಿದೆ. ಇದೀಗ ಗ್ರಾಹಕರ ಹೆಚ್ಚಿನಅನುಕೂಲತೆಗಾಗಿ ಬ್ರಹ್ಮಾವರ ತಾಲೂಕಿನಲ್ಲಿರುವ ಬ್ಯಾಂಕಿನ ಸಾಬ್ರಕಟ್ಟೆ ಶಾಖೆಯನ್ನು ಈಗ ಇರುವ ಕಟ್ಟಡದಿಂದ ಶಿರಿಯಾರ ಗ್ರಾಮದ ಬ್ರಹ್ಮಾವರ-ಹಾಲಾಡಿ ಮುಖ್ಯರಸ್ತೆಯಲ್ಲಿರುವ ಸಾಬ್ರಕಟ್ಟೆಯ “ಎಸ್. ಎಸ್. ಕಾಂಪ್ಲೆಕ್ಸ್”ಗೆ ಸ್ಥಳಾಂತರಿಸಲಾಗುವುದು.ಈ ಸ್ಥಳಾಂತರ ಸಮಾರಂಭ ಹಾಗೂ ಹೊಸಎ.ಟಿ.ಎಂ.ಕೇಂದ್ರದ ಉದ್ಘಾಟನೆ ಅ.28 ರಂದು ಪೂರ್ವಾಹ್ನ 10.30 ಗಂಟೆಗೆ ನಡೆಯಲಿದೆ.

ಸದಾ“ಗ್ರಾಹಕ ಸ್ನೇಹಿ”ತತ್ವದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಬ್ಯಾಂಕಿನಲ್ಲಿ ಈಗಾಗಲೇ 14 ಎ.ಟಿ.ಎಂ.ಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಸಾಬ್ರಕಟ್ಟೆ ಶಾಖೆಯಲ್ಲಿ ಉದ್ಘಾಟನೆಗೊಳ್ಳಲಿರುವ 15ನೇ ಎ.ಟಿ.ಎಂ.ಕೇಂದ್ರದ ಉದ್ಘಾಟನೆಯನ್ನುಉಡುಪಿ ಚಿಕ್ಕಮಗಳೂರು ಲೋಕಸಭಾಕ್ಷೇತ್ರದ ಮಾನ್ಯ ಸಂಸದ ಕೋಟ ಶ್ರೀನಿವಾಸ ಪೂಜಾರಿಅವರುನೆರವೇರಿಸಲಿರುವರು.

ಶಾಖೆಯಉದ್ಘಾಟನಾ ಸಮಾರಂಭದಲ್ಲಿ ಬ್ಯಾಂಕಿನ ಅಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ದೀಪ ಪ್ರಜ್ವಲನೆ ಮಾಡಲಿರುವರು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕುಂದಾಪುರ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ, ಶಿರಿಯಾರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಬಿ.ಪ್ರದೀಪ್ ಬಲ್ಲಾಳ್, ಶಿರಿಯಾರ ಗ್ರಾಮ ಪಂಚಾಯತ್‌ನ ಅಧ್ಯಕ ಸುಧೀಂದ್ರ ಶೆಟ್ಟಿ ಹಾಗೂ ಕಟ್ಟಡ ಮಾಲಕ ಸುರೇಶ್ ಶೆಟ್ಟಿ ಬಿ.ಮತ್ತುಶರತ್‌ಕುಮಾರ್ ಶೆಟ್ಟಿ ಭಾಗವಹಿಸಲಿರುವರು.

ಗ್ರಾಹಕರಿಗೆಉನ್ನತ ಸೇವೆಯನ್ನು ನೀಡುವುದರೊಂದಿಗೆ ಜನಮನ್ನಣೆ ಪಡೆದಿರುವ ಈ ಶಾಖೆಯನ್ನು ಗ್ರಾಹಕರ ಅನುಕೂಲಕ್ಕಾಗಿ ಸಂಪೂರ್ಣ ಹವಾನಿಯಂತ್ರಿತಗೊಳಿಸಲಾಗಿದೆ. ಸ್ಥಳಾಂತರಗೊಳ್ಳಲಿರುವ ಈ ಶಾಖೆಯು ಸಂಪೂರ್ಣ ಗಣಕೀಕೃತಗೊಂಡು, ಏಕಗವಾಕ್ಷಿ, ಕೋರ್ ಬ್ಯಾಂಕಿಂಗ್ ಹಾಗೂ ಆರ್‌ಟಿಜಿಎಸ್ ಮತ್ತು ನೆಪ್ಟ್ ಸೌಲಭ್ಯಗಳೊಂದಿಗೆ ಕಾರ್ಯಾರಂಭಗೊಳ್ಳಲಿದೆ ಎಂದು ಬ್ಯಾಂಕಿನ ಪ್ರಕಟಣೆ ತಿಳಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article