
‘ಹೇ ಗೋವಿಂದ್’ ಜುಗಲ್‌ಬಂದಿ ಕಾರ್ಯಕ್ರಮ
Wednesday, October 23, 2024
ಮಂಗಳೂರು: ಅಮೇರಿಕಾದ ನ್ಯೂಯಾರ್ಕ್ ನಗರದಲ್ಲಿ ಸಂಗೀತ ದಿಗ್ಗಜರಾದ ಖ್ಯಾತ ಹಿಂದೂಸ್ತಾನಿ ಗಾಯಕ ಹುಬ್ಬಳ್ಳಿಯ ಪಂ. ಜಯತೀರ್ಥ ಮೇವುಂಡಿ ಹಾಗೂ ಬಾನ್ಸರಿ ವಾದಕ ಪಂ. ಪ್ರವೀಣ್ ಗೋಡ್ಕಿಂಡಿ ಅವರ ‘ಹೇ ಗೋವಿಂದ್’ ಎಂಬ ಜುಗಲ್‌ಬಂದಿ ಕಾರ್ಯಕ್ರಮ ನಡೆಯಿತು. ಹಾರ್ಮೊನಿಯಂನಲ್ಲಿ ಮಂಗಳೂರಿನ ಪ್ರೊ. ನರೇಂದ್ರ ಎಲ್. ನಾಯಕ್, ತಬ್ಲಾದಲ್ಲಿ ಮುಂಬಯಿಯ ಈಶಾನ್ ಘೋಷ್, ಪಖಾವಾಜ್‌ನಲ್ಲಿ ಸುಖದ್ ಮುಂಡೆ, ಸೈಡ್ ರಿದಂನಲ್ಲಿ ಮುಂಬಯಿಯ ಸೂರ್ಯಕಾಂತ್ ಸುರ್ವೆ ಸಹಕರಿಸಿದ್ದರು.