ನವರಾತ್ರಿ ಧಾರ್ಮಿಕ ಹೆಸರಿನಲ್ಲಿ ಮಾಧಕ ದ್ರವ್ಯ ಸೇವನೆಯ ಅಸಭ್ಯ ನೃತ್ಯಕ್ಕೆ ಅನುಮತಿ ನೀಡಬಾರದು: ದುರ್ಗಾವಾಹಿನಿ ಆಗ್ರಹ

ನವರಾತ್ರಿ ಧಾರ್ಮಿಕ ಹೆಸರಿನಲ್ಲಿ ಮಾಧಕ ದ್ರವ್ಯ ಸೇವನೆಯ ಅಸಭ್ಯ ನೃತ್ಯಕ್ಕೆ ಅನುಮತಿ ನೀಡಬಾರದು: ದುರ್ಗಾವಾಹಿನಿ ಆಗ್ರಹ

ಮಂಗಳೂರು: ನವರಾತ್ರಿಯ ಧಾರ್ಮಿಕ ಹೆಸರಿನಲ್ಲಿ ಮಾಧಕ ದ್ರವ್ಯ ಸೇವನೆಯ ಅಸಭ್ಯ ನೃತ್ಯದ ಕಾರ್ಯಕ್ರಮ ಆಯೋಜನೆ ಮಾಡಿರುವುದು ಗಮನಕ್ಕೆ ಬಂದಿರುತ್ತದೆ. ಪೊಲೀಸ್ ಇಲಾಖೆ ಯಾವುದೇ ಕಾರಣಕ್ಕೂ ಇಂತಹ ಕಾರ್ಯಕ್ರಮಗಳಿಗೆ ಅನುಮತಿ ನೀಡಬಾರದು ಎಂದು ಜಿಲ್ಲಾ ದುರ್ಗಾವಾಹಿನಿ ಪ್ರಕಟಣೆಯಲ್ಲಿ ಆಗ್ರಹಿಸಿದೆ.
ದುರ್ಗಾಮಾತೆಯ ಪವಿತ್ರ ನವರಾತ್ರಿಯ ಹೆಸರಿನಲ್ಲಿ ಇಂತಹ ಅಸಭ್ಯ ಕಾರ್ಯಕ್ರಮ ಧಾರ್ಮಿಕ ಅಪಚಾರ ವಾಗುವುದಿಲ್ಲದೆ ಧಾರ್ಮಿಕ ನಿಂದನೆ ಆಗಿರುತ್ತದೆ ಅಲ್ಲದೆ ಕೋಮು ಸೂಕ್ಷ್ಮವಾದ ಕರಾವಳಿಯಲ್ಲಿ ಇಂತಹ ಕಾರ್ಯಕ್ರಮಗಳು ನಡೆದರೆ ಮುಂದೆ ಅಶಾಂತಿಗೂ ಕಾರಣವಾಗಬಹುದು ಹಾಗಾಗಿ ಯಾವುದೇ ಕಾರಣಕ್ಕೂ ಇಂತಹ ಕಾರ್ಯಕ್ರಮಗಳಿಗೆ ಅನುಮತಿ ನೀಡಬಾರದಾಗಿ ಪೊಲೀಸ್ ಕಮಿಷನರ್ ಅವರಿಗೆ ಮನವಿಯನ್ನು ನೀಡಿದ್ದು, ಇಂತಹ ಕಾರ್ಯಕ್ರಮ ನಡೆಯದಂತೆ ಕ್ರಮ ಕೈಗೊಳ್ಳಲು ಜಿಲ್ಲಾ ದುರ್ಗಾವಾಹಿನಿ ಸಂಯೋಜಕಿ ಶ್ವೇತಾ ಮತ್ತು ಜಿಲ್ಲಾ ಮಾತೃ ಶಕ್ತಿ ಸಂಯೋಜಕಿ ಸುಕನ್ಯಾ ರಾವ್ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article