
ಎಐಸಿಸಿ ಸಂಯೋಜಕರಾಗಿ ನವೀನ್ ಡಿಸೋಜ ನೇಮಕ
Tuesday, October 29, 2024
ಮಂಗಳೂರು: ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಾಲ್ಘರ್ ಜಿಲ್ಲೆಯ ವಸಾಯಿ ವಿಧಾನಸಭಾ ಕ್ಷೇತ್ರಕ್ಕೆ ಎಐಸಿಸಿ ಸಂಯೋಜಕರಾಗಿ ಕಾರ್ಪೊರೇಟರ್ ನವೀನ್ ಡಿಸೋಜ ಅವರನ್ನು ನೇಮಿಸಿ ಎಐಸಿಸಿ ವಾರ್ ರೂಂ ಅಧ್ಯಕ್ಷ ಸಸಿಕಾಂತ್ ಸೆಂಥಿಲ್ ಆದೇಶ ಹೊರಡಿಸಿದ್ದಾರೆ.
ನವೀನ್ ಡಿಸೋಜ ಅವರು ಕೆಪಿಸಿಸಿ ಮಾಜಿ ಕಾರ್ಯದರ್ಶಿಯಾಗಿ, ಸಂಯೋಜಕರಾಗಿ, ಗೋವಾ ವಿಧಾನಸಭಾ ಉಸ್ತುವಾರಿಯಾಗಿ ಸೇವೆಸಲ್ಲಿದ್ದು, ಬೆಂದೂರು ವಾರ್ಡ್‌ನಿಂದ ನಾಲ್ಕು ಬಾರಿ ಮ.ನ.ಪಾ. ಸದಸ್ಯರಾಗಿ ಆಯ್ಕೆಯಾಗಿದ್ದಾರೆ.