ಎಂಆರ್‌ಪಿಎಲ್ ಗಣನೀಯ ಆದಾಯ ದಾಖಲೆ

ಎಂಆರ್‌ಪಿಎಲ್ ಗಣನೀಯ ಆದಾಯ ದಾಖಲೆ

ಮಂಗಳೂರು: ಕೇಂದ್ರ ಸರ್ಕಾರದ ಒಎನ್‌ಜಿಸಿ ಸ್ವಾಮ್ಯದ ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್(ಎಂಆರ್‌ಪಿಎಲ್) ದ್ವಿತೀಯ ತ್ರೈಮಾಸಿಕ ಮತ್ತು ಅರ್ಧ ವಾರ್ಷಿಕ ಅವಧಿಯಲ್ಲಿ ಕಳೆದ ಸಾಲಿಗಿಂತ ಗಣನೀಯ ಆದಾಯ ದಾಖಲಿಸಿದೆ.

ಎಂಆರ್‌ಪಿಎಲ್‌ನ 266ನೇ ಸಾಮಾನ್ಯ ಸಭೆ ಶುಕ್ರವಾರ ಕಂಪನಿಯ ಕಚೇರಿಯಲ್ಲಿ ನಡೆಯಿತು. ಈ ವೇಳೆ ಎರಡಮನೇ ತ್ರೈಮಾಸಿಕ ಹಾಗೂ ಅರ್ಧ ವಾರ್ಷಿಕ ಲೆಕ್ಕಾಚಾರವ ನ್ನು ಮಂಡಿಸಲಾಯಿತು. ಈ ತ್ರೈಮಾಸಿಕ ಸಾಲಿನಲ್ಲಿ ಕಚ್ಚಾ ತೈಲ ಸಂಸ್ಕರಣೆಯಿಂದ 28,786 ಕೋಟಿ ರೂ. ಆದಾಯ ಲಭಿಸಿದ್ದು, ಕಳೆದ ಬಾರಿ 22,844 ಕೋಟಿ ರೂ.  ಆಗಿತ್ತು. ಅರ್ಧ ವಾರ್ಷಿಕ ಅವಧಿಯಲ್ಲಿ ಈ ಬಾರಿ 56,075 ಕೋಟಿ ರೂ. ಆದಾಯ ಪಡೆದರೆ, ಕಳೆದ ಬಾರಿ 47,669 ಕೋಟಿ ರೂ. ಆಗಿತ್ತು. ಈ ತ್ರೈಮಾಸಿಕದಲ್ಲಿ 9,410 ಕೋಟಿ ರೂ.ಗಳ ತೈಲ ರಫ್ತು ಮಾಡಿದ್ದು, ಕಳೆದ ಅವಧಿಯಲ್ಲಿ 6,974 ಕೋಟಿ ರೂ. ಆಗಿತ್ತು. ಈ ಅರ್ಧ ವಾರ್ಷಿಕದಲ್ಲಿ 16,974 ಕೋಟಿ ರೂ. ತೈಲ ರಫ್ತು ಆಗಿದ್ದರೆ, ಕಳೆದ ಅವಧಿಯಲ್ಲಿ ಇದು 13,198 ಕೋಟಿ ರೂ. ಆಗಿತ್ತು.

ಕಳೆದ ತ್ರೈಮಾಸಿಕ ಅವಧಿಯಲ್ಲಿ ಕಳೆದ ಬಾರಿ ಲಾಭಕ್ಕಿಂತ ಮೊದಲಿನ ತೆರಿಗೆ 1,606 ಕೋಟಿ ರೂ. ಆಗಿದ್ದರೆ, ಈ ಬಾರಿ ನಷ್ಟಕ್ಕಿಂತ ಮೊದಲಿನ ತೆರಿಗೆ 1,041 ಕೋಟಿ  ರು.ಗೆ ಇಳಿಕೆಯಾಗಿದೆ. ಕಳೆದ ಅವಧಿಯಲ್ಲಿ ತೆರಿಗೆ ನಂತರದ ಲಾಭ 1,059 ಕೋಟಿ ರೂ. ಆಗಿದ್ದು, ಈ ಬಾರಿ 682 ಕೋಟಿ ರೂ.ಗೆ ಇಳಿಕೆಯಾಗಿದೆ.

ಅರ್ಧ ವಾರ್ಷಿಕ ಅವಧಿಯಲ್ಲಿ ಕಳೆದ ಬಾರಿ ಲಾಭಕ್ಕಿಂತ ಮೊದಲಿನ ತೆರಿಗೆ 3,164 ಕೋಟಿ ರೂ. ಆಗಿದ್ದು, ಈ ಬಾರಿ 940 ಕೋಟಿ ರೂ.ಗೆ ಇಳಿಕೆಯಾಗಿದೆ. ಕಳೆದ ಅವಧಿಯಲ್ಲಿ ತೆರಿಗೆ ನಂತರದ ಲಾಭ 2,072 ಕೋಟಿ ರೂ. ಆಗಿದ್ದು, ಈ ಬಾರಿ 617 ಕೋಟಿ ರೂ.ಗೆ ಇಳಿದಿದೆ. ಆಗಸ್ಟ್ 24ರಂದು ದೇವನಗೊಂಥಿ ಮಾರ್ಕೆಟಿಂಗ್ ಟರ್ಮಿನಲ್ ಕಾರ್ಯಾರಂಭಿಸಿದ್ದು, ತೈಲ ಟ್ಯಾಂಕರ್‌ಗಳಿಗೆ ತೈಲ ತುಂಬಿಸಿಕೊಂಡು ತೆರಳುತ್ತಿವೆ. ಆಲ್ತೂರು ಘಟಕ ಪ್ರತಿ ತಿಂಗಳು 15 ಕೆಟಿಎಲ್ ತೈಲ ಉತ್ಪನ್ನವನ್ನು ಪರಿಪೂರ್ಣವಾಗಿ ಪೂರೈಸುತ್ತಿದೆ. ಎರಡನೇ ಅವಧಿಯಲ್ಲಿ ಕಚ್ಚಾ ತೈಲವನ್ನು ಗರಿಷ್ಠ ಮಟ್ಟದಲ್ಲಿ ಸಂಸ್ಕರಿಸಲಾಗಿದೆ. ಘಟಕದ ಸಾಮರ್ಥ್ಯವನ್ನು ಶೇ.118.3ರಷ್ಟು ಬಳಸಿಕೊಳ್ಳಲಾಗಿದ್ದು, ಮೊದಲ ತ್ರೈಮಾಸಿಕದಲ್ಲಿ ಶೇ.117.6ರಷ್ಟು ಸಾಮರ್ಥ್ಯ ಬಳಸಲಾಗಿತ್ತು. ಎಂಆರ್‌ಪಿಎಲ್ ಸಾಧನೆಗೆ ವಿವಿಧ ಪ್ರಶಸ್ತಿಗಳು ಲಭಿಸಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article