ಬಿಜೆಪಿ ಸೇವಾಪಾಕ್ಷಿಕದ ಅಂಗವಾಗಿ ಖಾದಿ ಬಟ್ಟೆ ಖರೀದಿ ಮೂಲಕ ಬಿಜೆಪಿ ವತಿಯಿಂದ ಗಾಂಧೀ ಜಯಂತಿ ಆಚರಣೆ

ಬಿಜೆಪಿ ಸೇವಾಪಾಕ್ಷಿಕದ ಅಂಗವಾಗಿ ಖಾದಿ ಬಟ್ಟೆ ಖರೀದಿ ಮೂಲಕ ಬಿಜೆಪಿ ವತಿಯಿಂದ ಗಾಂಧೀ ಜಯಂತಿ ಆಚರಣೆ


ಮಂಗಳೂರು: ಬಿಜೆಪಿ ಸೇವಾ ಪಾಕ್ಷಿಕದ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವತಿಯಿಂದ ಮಹಾತ್ಮಾ ಗಾಂಧೀಜಿಯವರ ಜನ್ಮ ದಿನಾಚರಣೆಯ ಪ್ರಯುಕ್ತ ಮಂಗಳೂರಿನ ರಥಬೀದಿಯಲ್ಲಿರುವ ಖಾದಿ ಗ್ರಾಮೋದ್ಯೋಗ ಭವನದಲ್ಲಿ ಸಂಸದರು, ಶಾಸಕರು, ಬಿಜೆಪಿ ಪ್ರಮುಖರು ಖಾದಿ ಬಟ್ಟೆ ಖರೀದಿಸುವ ಮೂಲಕ ಅರ್ಥಪೂರ್ಣ ಗಾಂಧೀ ಜಯಂತಿಯನ್ನು ಆಚರಿಸಿದರು.

ದೇಶಿಯ ಉತ್ಪನ್ನಗಳು ಮತ್ತು ದೇಶಿಯ ಉದ್ಯಮಗಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆಶಯಕ್ಕೆ ಪೂರಕವಾಗಿ ಖಾದಿ ಉತ್ಪನ್ನಗಳನ್ನು ಖರೀದಿಸಲಾಯಿತು. 

ಬಿಜೆಪಿ ರಾಜ್ಯ ಕಾರ್ಯದರ್ಶಿ, ಸಂಸದ ಕ್ಯಾ. ಬ್ರಿಜೇಶ್ ಚೌಟ, ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ವೈ ಭರತ್ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಜಿಲ್ಲಾ ಉಪಾಧ್ಯಕ್ಷರುಗಳಾದ ರಾಕೇಶ್ ರೈ ಕೆಡೆಂಜಿ, ರವೀಂದ್ರ ಶೆಟ್ಟಿ ಉಳಿದೊಟ್ಟು, ಪೂಜಾ ಪೈ, ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ಡಾ. ಮಂಜುಳಾ ರಾವ್, ಯುವ ಮೋರ್ಚ ಜಿಲ್ಲಾಧ್ಯಕ್ಷ ನಂದನ್ ಮಲ್ಯ, ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಮಹೇಶ್ ಜೋಗಿ, ಪ್ರಮುಖರಾದ ನಿತಿನ್ ಕುಮಾರ್, ಸುಧೀರ್ ಶೆಟ್ಟಿ ಕಣ್ಣೂರು, ಅರುಣ್ ಶೇಟ್ ಮಹಿಳಾ ಪ್ರಮುಖರು, ಪದಾಧಿಕಾರಿಗಳು, ಅನನ್ಯ ಜವಾಬ್ದಾರಿಯ ಪ್ರಮುಖರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article