ಸಾವಿರ ಕಂಬದ ಬಸದಿ ಆವರಣದಲ್ಲಿ ಸ್ವಚ್ಛತಾ ಕಾರ್ಯ

ಸಾವಿರ ಕಂಬದ ಬಸದಿ ಆವರಣದಲ್ಲಿ ಸ್ವಚ್ಛತಾ ಕಾರ್ಯ


ಮೂಡುಬಿದಿರೆ: ರಾಷ್ಟ್ರಪಿತ ಮಹಾತ್ಮಾ ಗಾಂಧಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರೀ ಜಯಂತಿಯ ಅಂಗವಾಗಿ ಇಲ್ಲಿನ  ಶ್ರೀ ಜೈನ ಮಠ ಹಾಗೂ ಆಳ್ವಾಸ್ ಪದವಿ ಕಾಲೇಜಿನ ಎನ್ ಎಸ್.ಎಸ್. ವಿದ್ಯಾರ್ಥಿಗಳಿಂದ ಬುಧವಾರ ಸಾವಿರ ಕಂಬ ಬಸದಿಯ ಪ್ರಾಂಗಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. 

ಶ್ರೀ ಜೈನ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಸ್ವಾಮೀಜಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ ಮಹಾತ್ಮಾ ಗಾಂಧಿ ಸತ್ಯ ಅಹಿಂಸೆ, ಅಪರಿಗ್ರಹ ಶೀಲ ದೇಶ ಪ್ರೇಮ,ಸ್ವದೇಶಿವಸ್ತು ಗಳ ಉಪಯೋಗ ಧರ್ಮ ಸಾಮರಸ್ಯ

ಮೊದಲಾದ ಆದರ್ಶ್ ವನ್ನು ಪಾಲಿಸಿ ಯುವ ಜನತೆಗೆ ಭೋದಿಸಿ ವ್ರತ ದಂತೆ ಆಚರಿಸಿದವರು ನಾವೆಲ್ಲರೂ ಶಿಕ್ಷಣ ಸಹಕಾರ ಸ್ವಾವಲಂಬನೆ, ಸ್ವಚ್ಛತೆಗೆ ಒತ್ತು ಕೊಟ್ಟು ದೇಶದ ಪ್ರಗತಿಗೆ ಕೊಡುಗೆ ನೀಡುವ ಎಂದು ನುಡಿದು ಆಳ್ವಾಸ್ ಸಂಸ್ಥೆಯ ಸಾಮಾಜಿಕ ಕಳ ಕಳಿಯನ್ನು ಮೆಚ್ಚಿ ಅಭಿನಂದಿಸಿದರು.

ಆಳ್ವಾಸ್ ಉಪನ್ಯಾಸಕ ವಸಂತ ಎ, ಅಕ್ಷತಾ ಪ್ರಭು, ರಾಷ್ಟ್ರೀಯ ಸೇವಾ ಸಂಸ್ಥೆ ಅಧಿಕಾರಿಗಳು, ಆಳ್ವಾಸ್ ಪದವಿ ಕಾಲೇಜು ಸುಮಾರು 100 ರಷ್ಟು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.   ಜೈನ ಮಠದ ವ್ಯವಸ್ಥಾಪಕ ಸಂಜಯಂತ ಕುಮಾರ್ ಶೆಟ್ಟಿ ವಂದಿಸಿದರು.



Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article