ಸೂಕ್ತ ಅಧ್ಯಯನದಿಂದ ಉತ್ತಮ ವಕೀಲನಾಗಲು ಸಾಧ್ಯ: ಎಂ. ವೀರಪ್ಪ ಮೊಯಿಲಿ

ಸೂಕ್ತ ಅಧ್ಯಯನದಿಂದ ಉತ್ತಮ ವಕೀಲನಾಗಲು ಸಾಧ್ಯ: ಎಂ. ವೀರಪ್ಪ ಮೊಯಿಲಿ


ಮೂಡುಬಿದಿರೆ: ನಿರ್ವಿವಾದ ನ್ಯಾಯದಾನ ನಮ್ಮ ದೇಶದ ಅಭ್ಯುದಯಕ್ಕೆ ಪ್ರೇರಣೆ. ಸತ್ಯ ಮತ್ತು ಪ್ರಾಮಾಣಿಕತೆ ನ್ಯಾಯದಾನದ ಯಶಸ್ಸಿನ ಮೂಲ. ಸೂಕ್ತ ಅಧ್ಯಯನದಿಂದ ಉತ್ತಮ ವಕೀಲನಾಗಲು ಸಾಧ್ಯ ಎಂದು ಕೇಂದ್ರದ ಮಾಜಿ ಕಾನೂನು ಸಚಿವ, ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಹೇಳಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ಕಾನೂನು ಕಾಲೇಜಿನ ಕಾನೂನು ಕಾರ್ಯಕ್ರಮವನ್ನು ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದ ಡಾ. ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಮಂಗಳವಾರ ಉದ್ಘಾಟಿಸಿ ಮಾತನಾಡಿದರು.

ಎಲ್ಲಾ ಕ್ಷೇತ್ರದಲ್ಲಿಯೂ ಕಾನೂನು ತಜ್ಞರ ಬೇಡಿಕೆ ಇದೆ. ಕಾನೂನಿನಲ್ಲೂ ಕಲಿಕೆಗೆ ಹಲವಾರು ಅವಕಾಶಗಳಿದ್ದು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಮಾತನಾಡಿ, ಆಳ್ವಾಸ್ ಕಾನೂನು ಕಾಲೇಜಿನ ಕಟ್ಟಡಕ್ಕೆ ಎಂ. ವೀರಪ್ಪ ಮೊಯಿಲಿ ಹೆಸರು ಇಡಲಾಗುವುದು. ರಾಜ್ಯದಲ್ಲಿ 127 ಕಾನೂನು ಕಾಲೇಜುಗಳಿವೆ. ನಮ್ಮ ಕಾಲೇಜಿನಲ್ಲಿ ಎಲ್ಲಾ ಪೂರಕ ಘಟಕಗಳನ್ನು ಸ್ಥಾಪಿಸಿ, ಶಿಸ್ತು ಮತ್ತು ಶೈಕ್ಷಣಿಕ ಶ್ರೇಷ್ಠತೆ ಸಾಧಿಸಲಾಗುವುದು. ಮಾದರಿ ಕಾಲೇಜು ನಿರ್ಮಿಸುವ ಶ್ರಮ ನಮ್ಮದು ಎಂದರು.

ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಮಾತನಾಡಿ, ವೀರಪ್ಪ ಮೊಯಿಲಿ ಮುಖ್ಯಮಂತ್ರಿ ಆಗಿದ್ದಾಗ ಸಿಇಟಿ ಪರಿಚಯಿಸಿದ ಪರಿಣಾಮ ಇಂದು ರಾಜ್ಯದಲ್ಲಿ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಶಿಕ್ಷಣಕ್ಕೆ ಬೇಡಿಕೆ ಬಂದಿದೆ ಎಂದು ಹೇಳಿದರು.

ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜನ್ನು ಆಳ್ವಾಸ್ ಸ್ಥಾಪಿಸಲಿ ಎಂದರು.

ಬೆಂಗಳೂರು ವಕೀಲರ ಸಂಘದ ದರ್ಶನ್, ಮೂಡುಬಿದಿರೆ ವಕೀಲರ ಸಂಘದ ಸಂಸ್ಥಾಪಕ ಅಧ್ಯಕ್ಷ ಬಾಹುಬಲಿ ಪ್ರಸಾದ್, ಅಧ್ಯಕ್ಷ ಹರೀಶ್ ಪಿ., ಆಳ್ವಾಸ್ ಕಾನೂನು ಕಾಲೇಜಿನ ಪ್ರಾಂಶುಪಾಲ ಪ್ರೊ. ಮಹಾಂತೇಶ್ ಪಿ.ಎಸ್., ಆಡಳಿತ ಮಂಡಳಿ ಸದಸ್ಯೆ ಜಯಶ್ರೀ ಅಮರನಾಥ ಶೆಟ್ಟಿ, ಉದ್ಯಮಿ ಶ್ರೀಪತಿ ಭಟ್ ಉಪಸ್ಥಿತರಿದ್ದರು. 

ಉಪನ್ಯಾಸಕ ರಾಜೇಶ್ ಡಿಸೋಜ ಕಾರ್ಯಕ್ರಮ ನಿರೂಪಿಸಿ, ಕಾನೂನು ಕಾಲೇಜಿನ ಪ್ರಾಧ್ಯಾಪಕಿ ಮಮತಾ ಆರ್. ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article