ಕಾಂಗ್ರೆಸ್‌ನ ತುಷ್ಟೀಕರಣದ ಪರಮಾವಧಿಯಾದ ವಕ್ಫ್ ಕಾಯ್ದೆಯ ವಿರುದ್ಧ ತೀವ್ರ ಅಸಮಾಧಾನ: ಸತೀಶ್ ಕುಂಪಲ

ಕಾಂಗ್ರೆಸ್‌ನ ತುಷ್ಟೀಕರಣದ ಪರಮಾವಧಿಯಾದ ವಕ್ಫ್ ಕಾಯ್ದೆಯ ವಿರುದ್ಧ ತೀವ್ರ ಅಸಮಾಧಾನ: ಸತೀಶ್ ಕುಂಪಲ

ಮಂಗಳೂರು: ಕಾಂಗ್ರೆಸ್ಸಿನ ತುಷ್ಟೀಕರಣದ ಪರಮಾವಧಿಯಿಂದ 2013ರಲ್ಲಿ ಮಾಡಲಾದ ವಕ್ಫ್ ಕಾಯ್ದೆಯ ತಿದ್ದುಪಡಿಯಿಂದ ದೇಶದಲ್ಲಿ ಎಲ್ಲೂ ಯಾವ ಇಲಾಖೆಯಲ್ಲೂ ಕಾಣಲು ಸಿಗದ ಹಾಗೂ ದೇಶದ ಭೂ ಭಾಗವನ್ನು ಮನಸೋ ಇಚ್ಚೆ ಲೂಟಿ ಹೊಡೆಯುವುದಕ್ಕೆ ಅವಕಾಶ ಕೊಡುವಂತಹ ಕಾಯ್ದೆಯನ್ನು ತನ್ನ ಓಟ್ ಬ್ಯಾಂಕಿಗಾಗಿ ರಚಿಸಲಾಗಿತ್ತು.

ಇದೀಗ ಆ ಕಾಯಿದೆಗೆ ತಿದ್ದುಪಡಿ ತರಲು ಪ್ರಧಾನಮಂತ್ರಿ ನರೇಂದ್ರ ಮೋದಿಜಿಯವರ ಕೇಂದ್ರ ಸರಕಾರ ಜೆಪಿಸಿಯನ್ನು ರಚಿಸಿದ್ದು, ಶ್ಲಾಘನೀಯ ವಿಚಾರವಾಗಿದೆ. ಆದರೆ ಕಾಂಗ್ರೆಸ್ ತಮ್ಮ ಸಂಗಡಿಗರೊಂದಿಗೆ ಹಳೆಯ ಚಾಳಿಯನ್ನು ತೋರಿಸಿದೆ. ತಲತಲಾಂತರದಿಂದ ಬೇಸಾಯ ಮಾಡಿಕೊಂಡು ಬಂದಂತಹ ಬಡ ರೈತರ ಸಾವಿರಾರು ಎಕರೆ ಭೂಮಿಯನ್ನು ವಕ್ಫ್‌ಗೆ ಕೊಡಿಸಿ, ಆ ಮೂಲಕ ಮುಸಲ್ಮಾನರನ್ನು ಖುಷಿಪಡಿಸಿ ಈ ಚುನಾವಣೆಯ ಸಂಧರ್ಭದಲ್ಲಿ ಓಲೈಕೆ ರಾಜಕಾರಣ ಮಾಡುವ ಹುನ್ನಾರವನ್ನು ಮಾಡಿದೆ. ಇವರಿಗೆ ಕರ್ನಾಟಕದಲ್ಲಿ ಅಧಿಕಾರ ನಡೆಸಲು ಅನುವು ಮಾಡಿಕೊಟ್ಟ ಪ್ರಜೆಗಳು ಪ್ರತಿದಿನ ಹಿಡಿಶಾಪ ಹಾಕುವಂತೆ ಮಾಡಿದ್ದಾರೆ. 

ಬಡ ರೈತರಿಗೆ ಭೂಮಿಯನ್ನು ವಕ್ಫಗೆ ನೀಡುವಂತೆ ನೋಟೀಸ್ ಅನ್ನು ನೀಡಲಾಗಿದೆ. ಹೀಗೆ ಅನೇಕ ಪ್ರಕರಣಗಳಲ್ಲಿ ಜನ ಸಾಮಾನ್ಯರು, ಕಾಂಗ್ರೆಸ್ ಈ ಹಿಂದೆ ತುಷ್ಟೀಕರಣಕ್ಕಾಗಿ ಮಾಡಿದ ವಕ್ಫ ಕಾಯಿದೆಯ ವಿಷಫಲವನ್ನು ಉಣ್ಣುವಂತಾಗಿದೆ ಎಂದು ತನ್ನ ಅಸಮಾಧಾನವನ್ನು ದ.ಕ. ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article