ಜೆಸಿಐ ಮೂಡುಬಿದಿರೆ ತ್ರಿಭುವನ್ ವಲಯದಲ್ಲಿ ಪ್ರಥಮ

ಜೆಸಿಐ ಮೂಡುಬಿದಿರೆ ತ್ರಿಭುವನ್ ವಲಯದಲ್ಲಿ ಪ್ರಥಮ


ಮೂಡುಬಿದಿರೆ: ಶಂಕರಪುರದಲ್ಲಿ ನಡೆದ ವಲಯ ತರಬೇತಿ ಸಪ್ತಾಹ 2024 ರಲ್ಲಿ ಜೆಸಿಐ ಮೂಡುಬಿದಿರೆ ತ್ರಿಭುವನ್ ವಿವಿಧ ತರಬೇತಿಗಳಾದ ಎಂಪವರ್ ಯೂತ್, ಫ್ಯೂಚರ್, ಲೀಡರ್, ಶ್ರಾವಣ ತರಬೇತಿ ಸಪ್ತಹ, ಬಿಜಿನೆಸ್ ಸೆಮಿನಾರ್ ತರಬೇತಿ, ಟ್ರೈನಿಂಗ್ ಡೇ, ಟ್ರೈನಿಂಗ್ ಫೆಸ್ಟ್ ಮತ್ತು ತಾಂತ್ರಿಕ ಕೌಶಲ್ಯ ಅಭಿವೃದ್ಧಿ ತರಬೇತಿಗಳನ್ನು 70ಕ್ಕಿಂತ ಹೆಚ್ಚು ಮಾಡುವುದರ ಮೂಲಕ ವಲಯದಲ್ಲಿ ಮೊದಲ ಸ್ಥಾನ ಪಡೆದಿದೆ.

ವಲಯ ಅಧ್ಯಕ್ಷ ಗಿರೀಶ್ ಎಸ್.ಪಿ. ಅವರು ಜೆಸಿಐ ಅಧ್ಯಕ್ಷ ಪ್ರದೀಪ್ ಕುಮಾರ್ ಅವರಿಗೆ ನೀಡಿದರು. ಈ ಸಂದರ್ಭದಲ್ಲಿ ವಲಯದ ತರಬೇತಿ ವಿಭಾಗದ ನಿರ್ದೇಶಕರಾದ ಹೇಮಲತಾ ಪ್ರದೀಪ್ ಮತ್ತು ತರಬೇತಿಯ ವಿವಿಧ ವಿಭಾಗದ ಸಂಯೋಜಕರಾದ ಪರಮೇಶ್ವರ್ ಹೆಗಡೆ, ಅನಿತಾ ನರೇಂದ್ರ, ವಲಯ ಉಪಾಧ್ಯಕ್ಷರಾದ ವಿಘ್ನೇಶ್ ಪ್ರಸಾದ್, ಸನತ್ ಕುಮಾರ್ ಉಪಸ್ಥಿತರಿದ್ದರು.

ಮೂಡುಬಿದಿರೆ ಜೆಸಿಐ ನ ಪೂರ್ವ ಅಧ್ಯಕ್ಷ ಸಂತೋಷ್ ಕುಮಾರ್, ಸುನಿಲ್, ಮಹಿಳಾ ಜೆಸಿ ವಿಭಾಗದಿಂದ ಅಧ್ಯಕ್ಷೆ ಅಕ್ಷತಾ ಪ್ರದೀಪ್, ಜೂನಿಯರ್ ಜೆಸಿ ಅಧ್ಯಕ್ಷ ಶೈಲೇಶ್  ಉಪಸ್ಥಿತರಿದ್ದರು. ಎರಡನೇ ಸ್ಥಾನವನ್ನು ಜೆಸಿಐ ವಿಟ್ಲ ಪಡೆದುಕೊಂಡಿತ್ತು.



Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article