ಫಿಲೋಮಿನಾ ಪ. ಪೂ ಕಾಲೇಜಿನಲ್ಲಿ 'ವಾಲ್ಮೀಕಿ ದಿನಾಚರಣೆ' ಹಾಗೂ 'ಫಿಲೋ ಬ್ಲೋಸ್ಸಮ್-2024'  ಪ್ರತಿಭಾ ದಿನ ಕಾರ್ಯಕ್ರಮ

ಫಿಲೋಮಿನಾ ಪ. ಪೂ ಕಾಲೇಜಿನಲ್ಲಿ 'ವಾಲ್ಮೀಕಿ ದಿನಾಚರಣೆ' ಹಾಗೂ 'ಫಿಲೋ ಬ್ಲೋಸ್ಸಮ್-2024' ಪ್ರತಿಭಾ ದಿನ ಕಾರ್ಯಕ್ರಮ


ಪುತ್ತೂರು: ಸಂತ ಫಿಲೋಮಿನಾ ಪ. ಪೂ ಕಾಲೇಜು ಹಾಗೂ ಲಲಿತ ಕಲಾ ಸಂಘದ ಆಶ್ರಯದಲ್ಲಿ ಅ17 ರಂದು ವಾಲ್ಮೀಕಿ ದಿನಾಚರಣೆ ಹಾಗೂ 'ಫಿಲೋ ಬ್ಲೋಸ್ಸಮ್ 2024'  ಪ್ರತಿಭಾ ದಿನ ಕಾರ್ಯಕ್ರಮವು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸುಳ್ಯದ ಖ್ಯಾತ ಮಿಮಿಕ್ರಿ ಕಲಾವಿದರಾದ ಶ್ರೀ ಪಟ್ಟಾಭಿರಾಮ ಅವರಿಂದ ಮಿಮಿಕ್ರಿ ಹಾಗೂ ಹಾಸ್ಯ ಚಟಾಕಿಗಳೊಂದಿಗೆ ಸೇರಿದ ಕಾಲೇಜಿನ ವಿದ್ಯಾರ್ಥಿಗಳ ಮನರಂಜಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ. ಅಶೋಕ್ ರಾಯನ್ ಕ್ರಾಸ್ತಾ ಮಾತನಾಡಿ, ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರುವ ಹಾಗೂ ವಿದ್ಯಾರ್ಥಿಗಳ ಕಲಿಕೆಗೆ ಹೊಸ ಜೀವನ ಕೌಶಲ್ಯವನ್ನು ರೂಢಿಸಿಕೊಳ್ಳಲು  ಫಿಲೋ ಬ್ಲೋಸ್ಸಮ್  ನಂತಹ ಪ್ರತಿಭಾ  ಸ್ಪರ್ಧೆಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳುವ ಜೊತೆಗೆ ವಾಲ್ಮೀಕಿ ಜಯಂತಿಯ ಆಚರಣೆಯ ಮಹತ್ವದ ಕುರಿತು ಮಾತನಾಡಿದರು.

ದ್ವಿತೀಯ ವಾಣಿಜ್ಯ ವಿಭಾಗದ ಅದಿತಿ ಡಿ. ವಾಲ್ಮೀಕಿ ಜಯಂತಿಯ ಮಹತ್ವದ ಕುರಿತು ಮಾತನಾಡಿದರು.

ಈ ಸಂದರ್ಭದಲ್ಲಿ  ವೇದಿಕೆಯಲ್ಲಿ ತೀರ್ಪುಗಾರರಾಗಿ ಸಹಕರಿಸಿದ  ಪುತ್ತೂರಿನ ವರ್ಣ ಕುಟೀರ ಕಲಾ ಶಿಕ್ಷಣ ಸಂಸ್ಥೆಯ ಸಂಚಾಲಕರಾದ ಪ್ರವೀಣ್ ವರ್ಣಕುಟೀರ, ಫಿಲೋಮಿನಾ ಪದವಿ ಕಾಲೇಜಿನ ಹಿಂದಿ ಉಪನ್ಯಾಸಕರಾದ ಡಾ. ಡಿಂಪಲ್ ಜೆನಿಫರ್ ಫೆರ್ನಾಂಡಿಸ್  ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಸಮೂಹ ನೃತ್ಯ, ಏಕಪಾತ್ರಭಿನಯ, ಮಿಮಿಕ್ರಿ ಹಾಗೂ ಮೂಕಾಭಿನಯ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಪ್ರದರ್ಶನ ಕಲಾ ಸಂಘದ ವಿದ್ಯಾರ್ಥಿಗಳು ಪ್ರಾರ್ಥಿಸಿ, ಲಲಿತ ಕಲಾ ಸಂಘದ ನಿರ್ದೇಶಕರಾದ ಅಶ್ವಿನಿ ಕೆ ಸ್ವಾಗತಿಸಿ, ಉಪನ್ಯಾಸಕರಾದ ಉಷಾ ಎ. ಅತಿಥಿಗಳನ್ನು ಪರಿಚಯಿಸಿ, ಗೀತಾ ಎಂ. ವಂದಿಸಿ, ಸುಮಾ ಡಿ. ಕಾರ್ಯಕ್ರಮ ನಿರೂಪಿಸಿದರು.







Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article