
ಶಾಸಕರಾಗಿ, ಹಿಂದೂವಾಗಿ ಅಶೋಕ್ ರೈ ವಿಎಚ್‌ಪಿ ಕಾರ್ಯಕ್ರಮಕ್ಕೆ ಹೋಗಿರುವುದು ಸರಿಯಾದ ನಿರ್ಧಾರ: ಜಗದೀಶ್ ನೆಲ್ಲಿಕಟ್ಟೆ
ಪುತ್ತೂರು: ಶಾಸಕರ ನೆಲೆಯಲ್ಲಿ ಹಾಗೂ ಓರ್ವ ಹಿಂದೂವಾಗಿ ಧರ್ಮದ ಆಧಾರದಲ್ಲಿ ಶಾಸಕ ಅಶೋಕ್ ರೈ ಅವರಿಗೆ ವಿಎಚ್‌ಪಿಯಂತಹ ಕಾರ್ಯಕ್ರಮದಿಂದ ಆಹ್ವಾನವಿರುವಾಗ ಹೋಗಿರುವುದು ಸರಿಯಾದ ನಿರ್ಧಾರವಾಗಿದೆ. ಅಶೋಕ್ ರೈಗಳು ಒಂದು ದರ್ಮಕ್ಕೆ ಅಥವಾ ಪಂಗಡಕ್ಕೆ ಸೀಮಿತವಾದ ಶಾಸಕರಲ್ಲ ಎಂದು ಕಾಂಗ್ರೆಸ್ ಮುಖಂಡ ಹಾಗೂ ಪುತ್ತೂರು ನಗರಸಭೆಯ ಮಾಜಿ ಅಧ್ಯಕ್ಷ ಜಗದೀಶ್ ನೆಲ್ಲಿಕಟ್ಟೆ ಹೇಳಿದ್ದಾರೆ.
ಅವರು ಸೋಮವಾರ ಪುತ್ತೂರಿನಲ್ಲಿ ಮಾದ್ಯಮದೊಂದಿಗೆ ಮಾತನಾಡಿ ಅಶೋಕ್ ರೈ ಅವರು ಪುತ್ತೂರು ತಾಲೂಕಿಗೆ ಶಾಸಕರು ಒಂದು ಧರ್ಮ ಅಥವಾ ಪಂಗಡಕ್ಕೆ ಸೀಮಿತವಾದವರಲ್ಲ. ಒಂದು ಕಾರ್ಯಕ್ರಮದ ವಿಚಾರವನ್ನಿಟುಕೊಂಡು, ಹಲವಾರು ಚರ್ಚೆಗಳನ್ನು ಹುಟ್ಟು ಹಾಕುತ್ತಿರುವ ಕಾಂಗ್ರೆಸ್ಸಿಗರ ಧೋರಣೆ ಸರಿಯಲ್ಲ. ಹಾಗೆಂದು ಅವರು ಯಾವುದೇ ಪಕ್ಷದ ಕಾರ್ಯಕ್ರಮಕ್ಕೆ ಹೋಗಿಲ್ಲ. ಶಾಸಕರ ನೆಲೆಯಲ್ಲಿ ವಿಎಚ್‌ಪಿಯ ಕಾರ್ಯಕ್ರಮಕ್ಕೆ ಹೋಗಿದ್ದಾರೆ. ಅದು ಅವರ ಧರ್ಮ. ಯಾವುದೇ ಪಕ್ಷದ ಪ್ರಚಾರ ಸಭೆಗೆ ಅವರು ಹೋದದ್ದಲ್ಲ. ಈ ಬಗ್ಗೆ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಚರ್ಚೆ ಶೂನ್ಯ. ಮನುಷ್ಯನಾದವನ ಮನಸ್ಸು ರೋಗಗ್ರಸ್ಥನಾಗಬಾರದು. ಅಶೋಕ್ ರೈ ಅವರು ಶಾಸಕರಾದ ಮೇಲೆ ಎಷ್ಟು ಕೆಲಸ ಮಾಡಿದ್ದಾರೆ. ಅದೆಷ್ಟೋ ವರ್ಷಗಳಿಂದ ಬಡವರಿಗೆ ಸೀರೆ, ಬೆಡ್ ಶೀಟ್ ಹಂಚುವಂತ ಕಾರ್ಯ ಮಾಡುತ್ತಾ ಬಂದಿದ್ದಾರೆ. ಅಶೋಕ್ ರೈಗಳು ಸೀರೆ, ಬೆಡ್ ಶೀಟ್ ಗಳನ್ನ ಹಂಚುವ ಕಾರ್ಯಕ್ರಮಕ್ಕೆ ಎಲ್ಲಾ ಧರ್ಮದವರು ಬರಲ್ವಾ. ಅದರಲ್ಲಿ ಕಾಂಗ್ರೆಸ್, ಬಿಜೆಪಿ, ಎಸ್‌ಡಿಪಿಐ ಹೀಗೆ ಎಲ್ಲಾ ಪಕ್ಷದ ಮತದಾರರು ಭಾಗಿಯಾಗುತ್ತಿಲ್ಲವೇ ಎಂದು ಅಶೋಕ್ ರೈ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.