ಪೇಜಾವರಶ್ರೀ ವಿರುದ್ಧದ ಹೇಳಿಕೆ ಮೂಲಕ ಕಾಂಗ್ರೆಸ್ ಮನಸ್ಥಿತಿ ಬಯಲು: ಯಶ್‌ಪಾಲ್ ಸುವರ್ಣ

ಪೇಜಾವರಶ್ರೀ ವಿರುದ್ಧದ ಹೇಳಿಕೆ ಮೂಲಕ ಕಾಂಗ್ರೆಸ್ ಮನಸ್ಥಿತಿ ಬಯಲು: ಯಶ್‌ಪಾಲ್ ಸುವರ್ಣ


ಉಡುಪಿ: ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ವಿರುದ್ಧ ತನ್ನ ರಾಜಕೀಯ ತೆವಲಿಗಾಗಿ ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ನೀಡಿರುವ ವಿವಾದಾತ್ಮಕ ಹೇಳಿಕೆಗೆ ಶಾಸಕ ಯಶ್‌ಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಮತೀಯ ಶಕ್ತಿಗಳ ಓಲೈಕೆಗಾಗಿ ಕಾಂಗ್ರೆಸ್ ಮುಖಂಡರು ಹಿಂದೂ ಸಮಾಜದ ಸ್ವಾಮಿಗಳ ಬಗ್ಗೆ ತಮ್ಮ ಹೀನ ಮನಸ್ಥಿತಿಯನ್ನು ಬಿ.ಕೆ. ಹರಿಪ್ರಸಾದ್ ಹೇಳಿಕೆ ಮೂಲಕ ಬಯಲು ಮಾಡಿದ್ದಾರೆ.

ಹಿಂದುತ್ವ, ರಾಷ್ಟೀಯವಾದಿ ಚಿಂತನೆ ಮೂಲಕ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಿರುವ ಶ್ರೀಗಳು ತಮ್ಮ ಗುರುಗಳಾದ ಕೀರ್ತಿಶೇಷ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಹಾದಿಯಲ್ಲಿ ಸಾಗುತ್ತಾ ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಿದ್ದು, ಅವರ ವಿರುದ್ಧ ಹರಿಪ್ರಸಾದ್ ಹೇಳಿಕೆ ಸಮಸ್ತ ಹಿಂದೂ ಸಮಾಜಕ್ಕೆ ಮಾಡಿದ ಅಪಮಾನ.

ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣ ಸಮಿತಿ ಟ್ರಸ್ಟಿನ ವಿಶ್ವಸ್ಥರಾಗಿ ದೇಶದಾದ್ಯಂತ ಹಿಂದುತ್ವದ ಸೇವೆ ಸಲ್ಲಿಸುತ್ತಾ, ಜಾತಿ ಮತವನ್ನು ಮೀರಿ ಹಿಂದೂ ಸಮಾಜದ ಒಗ್ಗಟ್ಟಿಗಾಗಿ ಸದಾ ಮುಂಚೂಣಿಯಲ್ಲಿ ನಿಂತಿರುವ ಶ್ರೀಗಳ ಕಾರ್ಯವೈಖರಿಯಿಂದ ಕಾಂಗ್ರೆಸ್ ಮುಖಂಡರು ಭ್ರಮನಿರಸನಗೊಂಡು ಹತಾಶ ಹೇಳಿಕೆ ನೀಡುತ್ತಿದ್ದಾರೆ.

ಬೇಜವಾಬ್ದಾರಿ ಹೇಳಿಕೆ ನೀಡಿರುವ ಬಿ.ಕೆ. ಹರಿಪ್ರಸಾದ್ ತಕ್ಷಣ ಕ್ಷಮೆ ಯಾಚಿಸಬೇಕು. ಕಾಂಗ್ರೆಸ್ ಮುಖಂಡರು ಈ ಹೇಳಿಕೆ ಬಗ್ಗೆ ತಮ್ಮ ನಿಲುವನ್ನು ಕೂಡಲೇ ಸ್ಪಷ್ಟಪಡಿಸಬೇಕು. ತಪ್ಪಿದಲ್ಲಿ ಸಮಸ್ತ ಹಿಂದೂ ಸಮಾಜ, ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಲಿದೆ ಎಂದು ಯಶಪಾಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article