
ವಿದ್ಯಾಭಾರತಿ ಅಖಿಲ ರಾಷ್ಟ್ರೀಯ ಮಟ್ಟದ ವಾಲಿಬಾಲ್: ಕೈರಂಗಳ-ಮುಂಡಾಜೆ ಚಾಂಪಿಯನ್
ಪುತ್ತೂರು: ಪುತ್ತೂರು ವಿವೇಕಾನಂದ ಆಂಗ್ಲಮಾದ್ಯಮ ವಿದ್ಯಾಸಂಸ್ಥೆ ತೆಂಕಿಲ ಇಲ್ಲಿ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಕಳೆದ 4 ದಿನಗಳಿಂದ ನಡೆಯುತ್ತಿರುವ ವಿದ್ಯಾಭಾರತಿ ರಾಷ್ಟ್ರೀಯ ಮಟ್ಟದ ಬಾಲಕ-ಬಾಲಕಿಯರ ವಾಲಿಬಾಲ್ ಪಂದ್ಯಾಟ ಶನಿವಾರ ಸಂಪನ್ನಗೊಂಡಿತು.
14 ವರ್ಷದೊಳಗಿನ ಬಾಲ ವರ್ಗ:
14 ವರ್ಷದೊಳಗಿನ ಬಾಲ ವರ್ಗದ ಬಾಲಕರ ವಿಭಾಗದಲ್ಲಿ ವೆಸ್ಟ್ ಯು.ಪಿ ತಂಡ (ಪ್ರ), ಕರ್ನಾಟಕ, ತೆಲಂಗಾನ ಮತ್ತು ಆಂದ್ರಪ್ರವೇಶವನ್ನೊಳಗೊಂಡ ದಕ್ಷಿಣ ಮಧ್ಯ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಉಪ್ಪಿನಂಗಡಿಯ ಇಂದ್ರಪ್ರಸ್ಥ ವಿದ್ಯಾಲಯ ತಂಡ (ದ್ವಿ) ಮತ್ತು ತಮಿಳುನಾಡು ಮತ್ತು ಕೇರಳವನ್ನೊಳಗೊಂಡ ದಕ್ಷಿಣ ಕ್ಷೇತ್ರ ತಂಡ (ತೃ) ಸ್ಥಾನ ಪಡೆದಿದೆ.
ಬಾಲಕಿಯರ ವಿಭಾಗದಲ್ಲಿ ದಕ್ಷಿಣ ಕ್ಷೇತ್ರ ತಂಡ (ಪ್ರ), ದಕ್ಷಿಣ ಮಧ್ಯ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಉಪ್ಪಿನಂಗಡಿಯ ಇಂದ್ರಪ್ರಸ್ಥ ವಿದ್ಯಾಲಯ ತಂಡ (ದ್ವಿ) ಹಾಗೂ ಬಿಹಾರ್ ಕ್ಷೇತ್ರ ತಂಡ (ತೃ) ಸ್ಥಾನ ಪಡೆದಿದೆ.
17 ವರ್ಷದೊಳಗಿನ ಕಿಶೋರ ವರ್ಗ:
17 ವಯೋಮಾನದೊಳಗಿನ ಕಿಶೋರ ವರ್ಗದ ಬಾಲಕರ ವಿಭಾಗದಲ್ಲಿ ಈಸ್ಟ್ ಯು.ಪಿ. ತಂಡ (ಪ್ರ), ದಕ್ಷಿಣ ಮಧ್ಯ ಕ್ಷೇತ್ರ ತಂಡ (ದ್ವಿ), ವೆಸ್ಟ್ ಯು.ಪಿ ತಂಡ (ತೃ) ಸ್ಥಾನ ಪಡೆದಿದೆ. ಬಾಲಕಿಯರ ವಿಭಾಗದಲ್ಲಿ ದಕ್ಷಿಣ ಕ್ಷೇತ್ರ ತಂಡ (ಪ್ರ), ಬೆಳ್ತಂಗಡಿಯ ಮುಂಡಾಜೆ ಪ್ರೌಢ ಶಾಲೆಯ ವಿದ್ಯಾರ್ಥಿನಿಯರು ಪ್ರತಿನಿಧಿಸಿದ್ದ ದಕ್ಷಿಣ ಮಧ್ಯ ಕ್ಷೇತ್ರ (ದ್ವಿ) ಹಾಗೂ ರಾಜಸ್ಥಾನ್ ಕ್ಷೇತ್ರ ತಂಡ (ತೃ) ಸ್ಥಾನ ಪಡೆದಿದೆ.
19 ವರ್ಷದೊಳಗಿನ ತರುಣ ವರ್ಗ:
19 ವರ್ಷ ವಯೋಮಾನದೊಳಗಿನ ತರುಣ ವರ್ಗದಲ್ಲಿ ಶಾರದಾ ಗಣಪತಿ ವಿದ್ಯಾಸಂಸ್ಥೆ ಕೈರಂಗಳದ ವಿದ್ಯಾರ್ಥಿಗಳು ಪ್ರತಿನಿಧಿಸಿದ್ದ ದಕ್ಷಿಣ ಮಧ್ಯ ಕ್ಷೇತ್ರ ತಂಡ (ಪ್ರ), ಈಸ್ಟ್ ಯು.ಪಿ. ತಂಡ (ದ್ವಿ), ಉತ್ತರ್ ಕ್ಷೇತ್ರ (ತೃ) ಸ್ಥಾನ ಪಡೆದಿವೆ. ಬಾಲಕಿಯರ ವಿಭಾಗದಲ್ಲಿ ಮುಂಡಾಜೆ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿಯರು ಪ್ರತಿನಿಧಿಸಿದ್ದ ದಕ್ಷಿಣ ಮಧ್ಯ ಕ್ಷೇತ್ರ ತಂಡ (ಪ್ರ), ದಕ್ಷಿಣ ಕ್ಷೇತ್ರ ತಂಡ (ದ್ವಿ), ಹಾಗೂ ರಾಜಸ್ಥಾನ್ ಕ್ಷೇತ್ರ ತಂಡ (ತೃ) ಸ್ಥಾನ ಪಡೆದಿದೆ.
ಬಾಲಕರ ವಿಭಾಗದಲ್ಲಿ ಶಾರದಾ ಗಣಪತಿ ವಿದ್ಯಾಸಂಸ್ಥೆ ಕೈರಂಗಳದ ವಿದ್ಯಾರ್ಥಿಗಳಾದ ಗಿರೀಶ್ ಅವರು ಉತ್ತಮ ದಾಳಿಗಾರ, ಭರತ್ ಅವರು ಉತ್ತಮ ಲಿಪ್ಟರ್ ಹಾಗೂ ಮೋಹಿತ್ ಸರ್ವಾಂಗೀಣ ಆಟಗಾರ ವೈಯಕ್ತಿಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಬಾಲಕಿಯರ ವಿಭಾಗದಲ್ಲಿ ಅಂಜಲಿ ಅವರು ಉತ್ತಮ ದಾಳಿಗಾರ್ತಿ, ವರ್ಷಾ ಅವರು ಉತ್ತಮ ಲಿಪ್ಟರ್ ಹಾಗೂ ಸಹನಾ ಅವರು ಸರ್ವಾಂಗೀಣ ಆಟಗಾರ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಸಮಾರೋಪ:
ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ.ಎಂ. ಕೃಷ್ಣ ಭಟ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು.
ವಿದ್ಯಾಭಾರತಿ ಪ್ರಾಂತ ಸಂಘಟನಾ ಸಚಿವ್ ಉಮೇಶ್, ವಿದ್ಯಾಭಾರತಿ ದಕ್ಷಿಣ ಮಧ್ಯ ಕ್ಷೇತ್ರ ಖೇಲ್ ಪ್ರಮುಖ್ ಕೆ.ಆರ್.ಕೆ. ಸತ್ಯನಾರಾಯಣ, ದಕ್ಷಿಣ ಕ್ಷೇತ್ರ ಖೇಲ್ ಸಂಯೋಜಕ್ ಯು.ಪಿ. ಹರಿದಾಸ್, ವಿದ್ಯಾಭಾರತಿ ರಾಷ್ಟ್ರೀಯ ಮಟ್ಟದ ವಾಲಿಬಾಲ್ ಪಂದ್ಯಾಟದ ಸಂಯೋಜಕ್ ಕಿಶೋರ್ ಚೌವಾಣ್, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಡಾ. ಶಿವಪ್ರಕಾಶ್, ವಿವೇಕಾನಂದ ವಿದ್ಯಾಲಯದ ಸಂಚಾಲಕ ರವಿನಾರಾಯಣ, ಆಡಳಿತ ಮಂಡಳಿಯ ರಮೇಶ್ಚಂದ್ರ ನಾಯಕ್, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಆಶಾ ಬೆಳ್ಳಾರೆ ಮತ್ತಿತರರು ಇದ್ದರು ಇದ್ದರು.
ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಸತೀಶ್‌ಕುಮಾರ್ ಸ್ವಾಗತಿಸಿದರು. ದಕ್ಷಿಣ ಕನ್ನಡ ಜಿಲ್ಲಾ ವಿದ್ಯಾಭಾರತಿ ಖೇಲ್ ಪ್ರಮುಖ್ ಕರುಣಾಕರ್ ವಂದಿಸಿ, ಶಿಕ್ಷಕಿಯರಾದ ಕವಿತಾ ಕೆ.ಜಿ ಮತ್ತು ಸುಜಾತ ಕೆ. ನಿರೂಪಿಸಿದರು.