
ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ವೃದ್ಧನನ್ನ ರಕ್ಷಿಸಿದ ಭದ್ರತಾ ಸಿಬ್ಬಂದಿ
Friday, October 18, 2024
ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದ ಕುಮಾರದಾರ ಸ್ಥಾನಘಟ್ಟದ ಬಳಿ ಶುಕ್ರವಾರ ಬೆಳಗ್ಗೆ ಸ್ಥಾನಕ್ಕೆ ಇಳಿದ ವೃದ್ಧಭಕ್ತರೊಬ್ಬರು ಆಯತಪ್ಪಿ ಕೊಚ್ಚಿ ಹೋದದನ್ನು ಕಂಡ ಶ್ರೀ ದೇವಳದ ಭದ್ರತಾ ಸಿಬ್ಬಂದಿ ಲೋಕನಾಥ ಕೂಡಲಿ ತನ್ನ ಜೀವದ ಹಂಗನ್ನು ತೊರೆದು ನದಿಗೆ ಹಾರಿ ವೃದ್ಧನನ್ನ ರಕ್ಷಿಸಿದರು.
ಈ ಸಂದರ್ಭದಲ್ಲಿ ಅವರೊಂದಿಗೆ ಇನ್ನಿಬ್ಬರು ಸಹಚರರು ಸಹಕರಿಸಿದ್ದರು. ಶ್ರೀ ದೇವಳದ ವತಿಯಿಂದ ಸ್ನಾನ ಮಾಡುವಾಗ ಎಚ್ಚರಿಕೆಯಿಂದ ಇರುವಂತೆ ಎಷ್ಟೇ ಮಾಹಿತಿಗಳನ್ನ ಧ್ವನಿವರ್ಧಕದ ಮೂಲಕ ನೀಡಿದರೂ ಸ್ನಾನ ಮಾಡತಕ್ಕಂಥ ಭಕ್ತಾದಿಗಳು ಅದನ್ನು ಲೆಕ್ಕಿಸದೆ ನೀರಿಗೆ ಇಳಿದು ಸ್ನಾನ ಮಾಡುವುದು ಕಂಡು ಬರುತ್ತದೆ.