‘ಶಿರೂರು ನೃತ್ಯೋಲ್ಲಾಸ-2024’ ಜಿಲ್ಲಾ ಮಟ್ಟದ ನೃತ್ಯ ಸ್ಪರ್ಧೆ: ಪ್ರಥಮ ಬಹುಮಾನವನ್ನು ಮುಡಿಗೇರಿಸಿಕೊಂಡ ಕಲಾನರ್ತನ ಡಾನ್ಸ್ ಕ್ರೀವ್ ಜನ್ನಾಡಿ

‘ಶಿರೂರು ನೃತ್ಯೋಲ್ಲಾಸ-2024’ ಜಿಲ್ಲಾ ಮಟ್ಟದ ನೃತ್ಯ ಸ್ಪರ್ಧೆ: ಪ್ರಥಮ ಬಹುಮಾನವನ್ನು ಮುಡಿಗೇರಿಸಿಕೊಂಡ ಕಲಾನರ್ತನ ಡಾನ್ಸ್ ಕ್ರೀವ್ ಜನ್ನಾಡಿ


ಉಡುಪಿ: ಉಡುಪಿ ಜಿಲ್ಲೆಯ ಶಿರೂರು ಮುದ್ದು ಮನೆಯಲ್ಲಿ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿಯ ವತಿಯಿಂದ ಆರನೇ ವರ್ಷದ ಶಾರದೋತ್ಸವದ ಪ್ರಯುಕ್ತ ನಮ್ಮೂರ ಸಂಭ್ರಮ-೬ರಲ್ಲಿ ಉಡುಪಿ ಜಿಲ್ಲಾಮಟ್ಟದ ನೃತ್ಯ ಸ್ಪರ್ಧೆ ಶಿರೂರು ನೃತ್ಯೋಲ್ಲಾಸ-2024 ನಡೆಯಿತು.

13 ಘಟಾನುಘಟಿ ತಂಡಗಳ ನಡುವೆ ನಮ್ಮ ಕಲಾನರ್ತನ ಜನ್ನಾಡಿ ತಂಡವು ಭಾಗವಹಿಸಿ ಪ್ರಥಮ ಸ್ಥಾನವನ್ನು ಬಾಚಿಕೊಂಡಿತು. ಕಲಾನರ್ತನ ತಂಡದ ಮನೀಶ್ ಕುಲಾಲ್ ಮತ್ತು ರಕ್ಷಿತಾ ಅವರ ಸಾರಥ್ಯದಲ್ಲಿ, ಕೊರಿಯೋಗ್ರಾಫರ್ ವಿಖ್ಯಾತ್ ಅವರ ನೇತೃತ್ವದಲ್ಲಿ, ಸ್ವಾತಿ ಮೇಕಪ್ ಆರ್ಟಿಸ್ಟ್ ಹಾಲಾಡಿ ಇವರ ಮುಖ ವರ್ಣಿಕೆಯಲ್ಲಿ ಹಾಗೂ ಎಲ್ಲಾ ನೃತ್ಯಪಟುಗಳ ಸಮರ್ಪಣೆಯಿಂದ ಕಲಾನರ್ತನ ಡಾನ್ಸ್ ಕ್ರೀವ್ ಜನ್ನಾಡಿ ತಂಡವು ಜಿಲ್ಲಾಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಸ್ಪರ್ಧಿಸಿ ಪ್ರಥಮ ಸ್ಥಾನ ಗಳಿಸಿ 15,000 ರೂ. ನಗದು, ಮೆಡಲ್ ಹಾಗೂ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. 

ಇದಕ್ಕೆ ಸಹಕಾರ ನೀಡಿದ ಕಲಾನರ್ತನ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು, ಕಾರ್ಯದರ್ಶಿಗಳು, ಸದಸ್ಯರು, ತಂಡದ ಎಲ್ಲಾ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಕಲಾನರ್ತನ ಸಂಸ್ಥೆಯ ಸಂಸ್ಥಾಪಕ ಮನಿಷ್ ಕುಲಾಲ್ ಇವರು ಅಭಿನಂದನೆ ಸಲ್ಲಿಸಿದ್ದಾರೆ.



Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article