
ಸಿ.ಎನ್.ಜಿ ಸಮಸ್ಯೆ ಪರಿಹರಿಸಲು ಮನವಿ
Sunday, October 20, 2024
ಉಡುಪಿ: ಜಿಲ್ಲೆಯಲ್ಲಿ ಉಂಟಾಗಿರುವ ಸಿಎನ್‌ಜಿ ಸಮಸ್ಯೆ ಪರಿಹರಿಸುವಂತೆ ಕೇಂದ್ರ ಪೆಟ್ರೋಲಿಯಂ ಸಚಿವರಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಪತ್ರ ಬರೆದು ಆಗ್ರಹಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ರಿಕ್ಷಾ ಮತ್ತು ಕಾರುಗಳ ಸಹಿತ ಸಿ.ಎನ್.ಜಿ ಉಪಯೋಗಿಸುವ ವಾಹನಗಳಿಗೆ ಅನಿಲ ಸರಬರಾಜು ಕೊರತೆಯಿಂದ ಪೆಟ್ರೋಲ್ ಬಂಕ್‌ಗಳ ಎದುರು ನೂರಾರು ವಾಹನಗಳು ದಿನಗಟ್ಟಲೆ ಸಿ.ಎನ್.ಜಿ.ಗಾಗಿ ಕಾಯುತ್ತಿರುವುದು ಕಂಡುಬರುತ್ತಿದೆ. ಆಟೋರಿಕ್ಷಾ ಚಾಲಕರು ಮತ್ತು ಮಾಲಕರು ಬಡವರಾಗಿದ್ದು, ಗಂಭೀರ ಸಮಸ್ಯೆ ಎದುರಿಸುತ್ತಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ 8 ಸಿ.ಎನ್.ಜಿ ಔಟ್‌ಲೆಟ್‌ಗಳಿದ್ದು, ಎಲ್ಲಾ ವಿತರಣಾ ಸಂಸ್ಥೆಗಳಲ್ಲೂ ವಾಹನ ಚಾಲಕರು ಕಾಯುವಂತಾಗಿದೆ. ಹಿಂದೊಮ್ಮೆ ಇಂಥದೇ ಸಮಸ್ಯೆ ಉಂಟಾಗಿದ್ದು, ಕೇಂದ್ರ ಸರ್ಕಾರದ ಮಧ್ಯಪ್ರವೇಶದಿಂದ ಸಮಸ್ಯೆ ಪರಿಹರಿಸಲಾಗಿದೆ. ಆದ್ದರಿಂದ, ತಕ್ಷಣ ಮಧ್ಯಪ್ರವೇಶಿಸಿ ವಿತರಣಾ ಕೇಂದ್ರಗಳಿಗೆ ಸಿ.ಎನ್.ಜಿ ಸರಬರಾಜು ಮಾಡಲು ಆದೇಶ ನೀಡುವಂತೆ ಸಂಸದ ಕೋಟ ಪತ್ರದಲ್ಲಿ ವಿನಂತಿಸಿದ್ದಾರೆ.