ಕಡಿಯಾಳಿಯಲ್ಲಿ ಸಂಭ್ರಮದ ನವರಾತ್ರಿ ಮಹೋತ್ಸವ ಸಂಪನ್ನ

ಕಡಿಯಾಳಿಯಲ್ಲಿ ಸಂಭ್ರಮದ ನವರಾತ್ರಿ ಮಹೋತ್ಸವ ಸಂಪನ್ನ


ಉಡುಪಿ: ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ದೇವಳದ ಆಡಳಿತಾಧಿಕಾರಿ ಮಾರುತಿ ನೇತೃತ್ವದಲ್ಲಿ ಶರನ್ನವರಾತ್ರಿ ಮಹೋತ್ಸವದ ಸಂಭ್ರಮದಿಂದ ನಡೆಯಿತು.

ಪ್ರತಿದಿನವೂ ದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ವಿಶೇಷ ಪೂಜೆ, ಸೇವಾದಿಗಳು, ಅನ್ನಸಂತರ್ಪಣೆ ನಡೆಸಲಾತು.

ಮೂಲಾನಕ್ಷತ್ರ ದಿನದಂದು ಶಾರದಾ ಪೂಜಾರಂಭಗೊಂಡಿದ್ದು, ಶ್ರೀ ಶಾರದೆಯ ಮೂರ್ತಿ ಪ್ರತಿಷ್ಠಾಪನೆ ನಡೆಯಿತು. ದುರ್ಗಾಷ್ಟಮಿ ಪರ್ವಕಾಲದಲ್ಲಿ ಮಹಾಚಂಡಿಕಾ ಯಾಗ, ಸಾರ್ವಜನಿಕ ಅನ್ನಸಂತರ್ಪಣೆ ಏರ್ಪಡಿಸಲಾಯಿತು. ವಿಜಯದಶಮಿಯಂದು ಕನ್ನಿಕಾಪೂಜೆ, ಶಮೀಪೂಜೆ, ಶಾರದಾ ವಿಸರ್ಜನೆ, ಮಹಾಮಂತ್ರಾಕ್ಷತೆ ನಡೆಯಿತು ಎಂದು ದೇವಳದ ಕಾರ್ಯನಿರ್ವಹಣಾಧಿಕಾರಿ ಸವಿತಾ ತಿಳಿಸಿದ್ದಾರೆ.

ಶರ್ವಾಣಿ ಮಂಟಪದಲ್ಲಿ ಪ್ರತಿದಿನವೂ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ವಿವಿಧ ಕಲಾವಿದರಿಂದ ಕಾರ‍್ಯಕ್ರಮ ಆಯೋಜಿಸಲಾಯಿತು ಎಂದು ದೇವಳದ ವ್ಯವಸ್ಥಾಪಕಿ ಲತಿಕಾ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article