
ನೀರಿಗೆ ಬಿದ್ದು ಯುವಕ ಸಾವು
Wednesday, November 6, 2024
ಬಂಟ್ವಾಳ: ಇಲ್ಲಿಗೆ ಸಮೀಪದ ಸಿದ್ಧಕಟ್ಟೆ ಸಮೀಪದ ಕಲಾಯಿದಡ್ಡ ಎಂಬಲ್ಲಿ ಕಾಲು ಜಾರಿ ನೀರಿಗೆ ಬಿದ್ದು ಯುವಕ ಸಾವನ್ನಪ್ಪಿದ ಘಟನೆ ಮಂಗಳವಾರ ನಡೆದಿದೆ.
ಮೃತರನ್ನು ಕಲಾಯಿದಡ್ಡ ಕೃಷಿಕ ಬೇಬಿ ಶೆಟ್ಟಿ ಎಂಬವರ ಪುತ್ರ ಸುಕ್ಷಿತ್ (34) ಎಂದು ಗುರುತಿಸಲಾಗಿದ್ದು, ಇವರು ಮನೆ ಸಮೀಪದ ಅಡಿಕೆ ತೋಟದಲ್ಲಿ ಅಡಿಕೆ ಹೆಕ್ಕಲು ಹೋಗಿದ್ದ ವೇಳೆ ಈ ಘಟನೆ ನಡೆದಿದೆ. ಅವಿವಾಹಿತರಾಗಿದ್ದ ಮೃತರು ತಂದೆ, ತಾಯಿ ಮತ್ತು ಸಹೋದರಿ ಇದ್ದಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.