.jpeg)
ಬಂತು ಕನ್ನಡ ರಾಜ್ಯೋತ್ಸವ, ತಂತು ಹೊಸ ಹರುಷವ..!
ಕರ್ನಾಟಕ ರಾಜ್ಯದ ಒಂದು ಹೆಮ್ಮೆಯ ಗುರುತು ಕನ್ನಡ. ಕರ್ನಾಟಕ ಪ್ರಸಿದ್ಧವಾಗಲು ಅತಿ ಮುಖ್ಯವಾದ ಕಾರಣವೇ ಕನ್ನಡ. ಪ್ರಪಂಚದಾದ್ಯಂತ ಮೆರಗು ಮೂಡಿಸಿರುವಂತಹ ಭಾಷೆ ಕನ್ನಡ. ಕವಿಗಳು, ಕವಿಯತ್ರಿಗಳು, ಸಾಹಿತ್ಯಗಾರರು ಹುಟ್ಟಿ ಬೆಳೆದು ಕನ್ನಡವನ್ನೇ ತಮ್ಮ ಜೀವನವನ್ನಗಿಸಿಕೊಂಡು ಮುಂದಿನ ಪೀಳಿಗೆಗೆ ಮಾದರಿಯಾಗಿ ಉಳಿದರು.
ನಕ್ಷತ್ರದ ತಾರೆಯನ್ನು ಹೇಗೆ ಎಣಿಸಲಾಗುವುದಿಲ್ಲವೋ, ಹಾಗೆಯೇ ಕನ್ನಡದಲ್ಲಿ ಸಾಹಿತ್ಯಗಾರರು ಬರೆದಿರುವಂತಹ ಕೃತಿಗಳನ್ನು ಎನಿಸಲು ಸಾಧ್ಯವಿಲ್ಲ. ಪಂಪ ಆದಿಕವಿ ಎಂದು ಬಿರುದಂಕಿತರಾದವರು, ರನ್ನ, ಹೊನ್ನ, ಕುವೆಂಪು, ಕಾರಂತರು ವಚನಕಾರರಾದ ಬಸವಣ್ಣ ಅಕ್ಕಮಹಾದೇವಿ ಮುಂತಾದವರು ತಮ್ಮ ಕೃತಿಗಳ ಮೂಲಕ ಕನ್ನಡ ನಾಡನ್ನು ಕನ್ನಡದ ಕಂಪನ್ನು ಬೆಳೆಸಿದರು.
ಕನ್ನಡ ಸಾಹಿತ್ಯಕ್ಕೆ ಅದೆಷ್ಟು ಪ್ರಶಸ್ತಿಗಳು ದೊರಕಿಲ್ಲ ಕುವೆಂಪು 1967, ದಾರ ಬೇಂದ್ರೆ 1973, ಕೆ. ಶಿವರಾಮ ಕೊರಂತಾ 1977, ಮಾಸ್ತಿ ವೆಂಕಟೇಶ್ ಅಯ್ಯಂಗಾರ್ 1983, ವಿ.ಕೆ. ಗೋಕಾಕ್ 1990, ಯು.ಆರ್. ಅನಂತಮೂರ್ತಿ 1994, ಗಿರೀಶ್ ಕಾರ್ನಾಡ್ 1998 ಚಂದ್ರಶೇಖರ್ ಕಂಬ 2010 ಇವರೆಲ್ಲ ಮುಂದಿನ ಪೀಳಿಗೆಗೆ ಮಾದರಿಯಾದವರು.
ಇಂತಹ ಹೆಮ್ಮೆ ತರುವ ವಿಷಯ ನಮ್ಮ ಮುಂದಿದ್ದರೂ, ಕನ್ನಡದ ಪ್ರಾಮುಖ್ಯತೆ ನಮ್ಮ ಕನ್ನಡದ ಪ್ರದೇಶಗಳಲ್ಲಿ ಕಡಿಮೆಯಾಗುತ್ತಿದೆ. ಇದಕ್ಕೆ ಕಾರಣಕರ್ತರು ಯಾರು? ಇದಕ್ಕೆ ಪರಿಹಾರವೇ ಇಲ್ಲವೇ?
ನಮ್ಮ ಕರ್ಮಕ್ಕೆ ನಾವೇ ಹೊಣೆ ಅನ್ನೋ ಹಾಗೆ ನಮ್ಮ ಕನ್ನಡ ಅಪ್ರಾಮುಖ್ಯತೆಗೆ ನಾವೇ ಕಾರಣ. ನಾವು ದಿನನಿತ್ಯ ಮಾತಾಡುವ ವಾಕ್ಯಗಳಲ್ಲಿ ಒಂದಾದರೂ ಆಂಗ್ಲ ಪದ ಇಲ್ಲದಿದ್ದರೆ ನಮ್ಮ 'Status' ಕಡಿಮೆಯಾಗಿ ಬಿಡುವುದಿಲ್ಲವೇ. ಹೊಸದಾಗಿ ಶುರು ಮಾಡಿದ ಅಂಗಡಿಗಳಿಗೆ ಅಥವಾ ದೊಡ್ಡ ದೊಡ್ಡ ಕಂಪನಿಗಳಾಗಲಿ ಮಾಲ್ ಗಳಾಗಲಿ ಅಲ್ಲಿ ಇಂಗ್ಲಿಷ್ ಪದದ ನಾಮಕರಣವೇ ಮಾಡುತ್ತಾರೆ.
ಶಾಲಾ ಕಾಲೇಜುಗಳಲ್ಲಿ ಆಂಗ್ಲ ಭಾಷೆಗೆ ಇರುವಷ್ಟು ಪ್ರಾಮುಖ್ಯತೆ ನಮ್ಮ ಕನ್ನಡ ಭಾಷೆಗೆ ದೊರೆಯುತ್ತಿಲ್ಲ ಎಂಬುದು ನನ್ನ ಭಾವನೆ. ಹಾಗೆಂದು ಇಂಗ್ಲಿಷ್ ಕಲಿಯಬೇಡಿ ಎಂದಲ್ಲ ಆದರೆ ಮೊದಲ ಪ್ರಾಮುಖ್ಯತೆ ನಮ್ಮ ಕನ್ನಡಕ್ಕಿರಲಿ. ಒಂದು ಒಳ್ಳೆ ಉದಾಹರಣೆ ಎಂದರೆ 'ಕನ್ನಡದ ಹೆಸರಾಂತ ನಿರೂಪಕಿ ಅಪರ್ಣ'.
ಕನ್ನಡದಲ್ಲಿ ಅವರ ಸಾಧನೆಯನ್ನು, ಜೀವನ ಚರಿತ್ರೆಯನ್ನು ಒಮ್ಮೆ ನೋಡಿದರೆ ಸಾಕು ಕನ್ನಡವನ್ನು ನಮ್ಮ ರಕ್ತದಲ್ಲಿ ಬೆರೆಸಿಕೊಂಡರೆ ತಮ್ಮ ಜೀವನದಲ್ಲಿ ಸಾರ್ಥಕತೆಯನ್ನು ಮೆರೆಯಬಹುದು ಎಂದು ತೋರಿಸಿಕೊಟ್ಟ ಕೀರ್ತಿ ಅವರದ್ದು. ಅವರ ಬಾಲನ್ನು ಸ್ಪೂರ್ತಿಯಾಗಿ ಇಟ್ಟುಕೊಂಡು ನಮ್ಮ ಕನ್ನಡವನ್ನು ನಾವು ಉಳಿಸುವ, ಕನ್ನಡದಲ್ಲಿ ಮಾತಾಡಿ ಕನ್ನಡವನ್ನು ಮತ್ತಷ್ಟು ಬೆಳೆಸೋಣ...
ಸುಬ್ಬಲಕ್ಷ್ಮೀ
ಪ್ರಥಮ ಬಿಎ
ವಿಶ್ವವಿದ್ಯಾಲಯ ಕಾಲೇಜು ಹಂಪನಕಟ್ಟೆ, ಮಂಗಳೂರು.