
ಯುವ ಜನತೆ ಪುಸ್ತಕ ಓದುವ ಬದಲು ಮೊಬೈಲ್‌ನ್ನು ಓದುತ್ತಿದ್ದಾರೆ: ವಿಶ್ವನಾಥ ಬದಿಕಾನ
ಮಂಗಳೂರು: ಯುವ ಜನತೆ ಪುಸ್ತಕವನ್ನು ಓಡುವ ಬದಲು ಮೊಬೈಲ್ ಅನ್ನು ಓಡುತ್ತಿದ್ದಾರೆ. ಈ ದಿನಗಳಲ್ಲಿ ಡಿಜಿಟಲ್ ಗ್ರಂಥಾಲಯ ಬಹಳಷ್ಟು ಅಭಿವೃದ್ಧಿ ಹೊಂದಿದ್ದು, ಬೇರೆ ಭಾಷೆಯ ಪುಸ್ತಕಗಳೊಂದಿಗೆ ಕನ್ನಡ ಪುಸ್ತಕಗಳೂ ಲಭ್ಯವಿದ್ದು, ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು. ಕನ್ನಡವನ್ನು ಕಲಿಯಲು ಸೂಕ್ತ ಮಾರ್ಗದರ್ಶನ ನೀಡುವವರು ಇದ್ದಾಗ ಅದನ್ನು ಉತ್ತಮ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಲು ಸಾಧ್ಯ ಎಂದು ಸಂತ ಅಲೋಶಿಯಸ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ವಿಶ್ವನಾಥ ಬದಿಕಾನ ಹೇಳಿದರು.
ಅವರು ಇಂದು ಮಂಗಳೂರಿನ ರಥಬೀದಿಯ ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಐಕ್ಯೂಎಸಿ, ಕನ್ನಡ ವಿಭಾಗ ಮತ್ತು ಲಲಿತಕಲಾ ಸಂಘದ ವತಿಯಿಂದ ಆಯೋಜಿಸಿದ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭುವನೇಶ್ವರಿ ಮಾತೆಗೆ ಪುಷ್ಪ ನಮನ ಮಾಡಿ ಮಾತನಾಡಿದರು.
ನಾವು ಬೇರೆಡೆಗೆ ಹೋಗಬೇಕಾದರೆ ಅಲ್ಲಿಯ ಭಾಷೆಯನ್ನು ಕಲಿತು ಸುಲಲಿತವಾಗಿ ಮಾತನಾಡುತ್ತೇವೆ. ಆದರೆ ನಮ್ಮೊಂದಿಗೆ ಇರುವಂತಹ ಕನ್ನಡ ಭಾಷೆಯನ್ನು ಅರಿತು ಕಲಿಯಲು ಮಾತ್ರ ಕಷ್ಟ. ನಾವು ನಮ್ಮೊಂದಿಗಿರು ಕನ್ನಡವನ್ನು ಪ್ರತಿಯೊಬ್ಬರೂ ಕಲಿಯಬೇಕು. ಇತ್ತೀಚಿನ ದಿನಗಳಲ್ಲಿ ಕನ್ನಡ ಭಾಷೆ ಜಾಣತನದಿಂದ ಕಾಣೆಯಾಗುತ್ತಿದೆ. ಆದುನಿಕ ಕಾಲಘಟ್ಟ ವೇಗವಾಗಿ ಬೆಳೆಯುತ್ತಿದ್ದು, ಕನ್ನಡವನ್ನು ಉಳಿಸಲು ಜನರ ಕೈಗೆ ಕನ್ನಡವನ್ನು ತಲುಪಿಸುವ ಕೆಲಸ ಮಾಡಬೇಕು ಎಂದರು.
ಕನ್ನಡಕ್ಕೆ 2000 ಸಾವಿರ ವರ್ಷಗಳ ಇತಿಹಾಸ ಇದ್ದು, ಇದು ಸಣ್ಣ ವಿಷಯವಲ್ಲ. ಕ್ರಿ.ಶ. 450ಕ್ಕೂ ಮೊದಲೇ ಕನ್ನಡ ಇತ್ತು ಎಂಬುದುದಕ್ಕೆ ಪುರಾವೆ ಸಿಕ್ಕಿದೆ. ಕನ್ನಡ ನಾಡು ಎಂದರೆ ಕಪ್ಪು ಮಣ್ಣನ ನಾಡು, ಅಚ್ಚ ಹಸಿರಾದ ನಾಡು. ಇಂದು ಆರ್ಥಿಕ, ಸಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಹಿರಿಮೆಯನ್ನು ಹೊಂದಿದ್ದು, ಕನ್ನಡದ ಕಂಪು ರಾರಾಜಿಸುತ್ತಿದೆ ಎಂದು ಹೇಳಿದರು.
ಕನ್ನಡವನ್ನು ಕದಂಬರು, ಚೋಳರು, ಚೇಳರು, ಮೈಸೂರು ಸಂಸ್ಥಾನದವರು ಕಟ್ಟುವಲ್ಲಿ ಮಹತ್ತರ ಪಾತ್ರ ವಹಿಸಿಕೊಳ್ಳುತ್ತದೆ. ಭಾರತವು ಭಾಷಾವಾರು ಹಂಚಿ ಹೋದಾಗ ಮೈಸೂರು ಪ್ರಾಂತ್ಯ, ಹೈದರಾಬಾದ್ ಕನ್ನಡ ಪ್ರಾಂತ್ಯ ಬೆಳೆಸಿದ್ದು, ಸ್ವತಂತ್ರ್ಯದ 15 ವರ್ಷಗಳ ನಂತರ 1973 ನ.1 ರಂದು ಕರ್ನಾಟಕ ರಾಜ್ಯವಾಯಿತು. ನಾವು ನಾಡು, ನುಡಿ, ಸಂಸ್ಕೃತಿ ಎಂದಾಗ ನಾವು ಇಡೀ ವರ್ಷ ಪೂರ್ತಿ ಅನುಸರಿಸಿದಾಗ ಕನ್ನಡ ಉಳಿಸಲು ಸಾಧ್ಯ ಎಂದರು.
ಅನೇಕರು ಇಂಗ್ಲಿಷ್ ಭಾಷೆಯಿಂದ ಕನ್ನಡ ಅವಾನತಿ ಆಗುತ್ತಿದೆ ಎನ್ನುತ್ತಾರೆ ಆದರೆ ಕನ್ನಡ ಎಂದಿಗೂ ಅಳಿಯುವುದಿಲ್ಲ ನಾವು ಕನ್ನಡವನ್ನು ಬಳಸಿದಾಗ ಮಾತ್ರ ಕನ್ನಡ ಭಾಷೆ ಭಾಷೆಯಾಗಿ ಉಳಿಯುತ್ತದೆ. ಕನ್ನಡದ ರತ್ನಗಳಾದ ಪಂಪ, ರನ್ನ, ಜನ್ನ, ಪೊನ್ನ, ಕುವೆಂಪು ಮೊದಲಾದವರನ್ನು ಅರಿಯಲು ಕನ್ನಡ ಅವಶ್ಯ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಜಯಕರ ಭಂಡಾರಿ ಎಂ. ಮಾತನಾಡಿ, ಭಾಷೆಯನ್ನು ಬಳಸಿದರೆ ಮಾತ್ರ ಭಾಷೆ ಉಳಿಯುತ್ತದೆ. ಮಾತೃ ಭಾಷೆ ಯಾವುದೇ ಇರಲಿ ನಮ್ಮ ಆಡಳಿತ ಭಾಷೆಯನ್ನು ನಾವು ಮನೆಯಿಂದ ಹೊರಗೆ ಉಪಯೋಗಿಸಿದಾಗ ಭಾಷೆ ಉಳಿಯುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಆಯೋಜಿಸಿದ್ದ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಯೋಜಕ ದೇವಿಪ್ರಸಾದ್, ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಲಲಿತಕಲಾ ಸಂಘದ ಸಂಯೋಜಕಿ ಡಾ. ಕೃಷ್ಣಪ್ರಭ ವಿಜೇತರ ಪಟ್ಟಿಯನ್ನು ಓದಿದರು. ಐಕ್ಯೂಎಸಿ ಸಹ ಸಂಯೋಜಕಿ ಡಾ. ಜೋತಿ ಪ್ರಿಯಾ ಸ್ವಾಗತಿಸಿ, ವಿದ್ಯಾರ್ಥಿನಿ ಅರ್ಚನಾ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ವಿಭಾಗದ ಡಾ. ನಾಗವೇಣಿ ಮಂಜಿ ವಂದಿಸಿದರು.