
ಸಿಸ್ಟರ್ ಡೋನಾಲ್ಡ್ ಪಾಯಸ್ ಇನ್ನಿಲ್ಲ
ಕಾರ್ಕಳ: ಜೀವನ್ ವೆಲ್ಫೇರ್ ಟ್ರಸ್ಟ್ ಕಾರ್ಕಳ ಇದರ ಸಂಸ್ಥಾಪಕಿ, ಕಾರ್ಕಳ ಅರುಣೋದಯ ವಿಶೇಷ ಶಾಲೆಯ ಮುಖ್ಯಸ್ಥೆ, ಸುಮಾರು 35 ವರ್ಷಗಳಿಂದ ವಿಶೇಷ ಮಕ್ಕಳ ನಿಸ್ವಾರ್ಥ ಸೇವೆ ಸಲ್ಲಿಸಿದ. ಜಿಲ್ಲಾ ರಾಜ್ಯೋತ್ಸವ ಹಾಗೂ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದ ಅರುಣೋದಯ ಸಿಸ್ಟರ್ ಎಂದೇ ಖ್ಯಾತರಾಗಿದ್ದ ಡೊನಾಲ್ದಾ ಪಾಯಸ್ (81) ಅಲ್ಪಕಾಲದ ಅಸೌಖ್ಯದಿಂದ ಮರಣ ಹೊಂದಿದರು
ಸಿಸ್ಟರ್ ಡೊನಾಲ್ಟಾ ಪಾಯಸ್ ರವರು ಬಂಟ್ವಾಳ ತಾಲೂಕು ಕರಿಂಗಾಣ ಗ್ರಾಮದ ಸೆಬಾಸ್ಟಿನ್ ಪಾಯ್ಸ್ ಮತ್ತು ಪೌಲಿನ ಫೆರ್ನಾಂಡೀಸ್ ರವರ ಪುತ್ರಿ.
ಅಜೆಕಾರು ಜ್ಯೋತಿ ಹೈಸ್ಕೂಲಿನಲ್ಲಿ ಮುಖ್ಯೋಪಾಧ್ಯಾಯಿನಿಯಾಗಿ ಸೇವೆ ಸಲ್ಲಿಸುತ್ತಿರುವಾಗಲೇ ಕಾರ್ಕಳ ವ್ಯಾಪ್ತಿಯಲ್ಲಿ ಸರ್ವೆ ಮಾಡಿ 2000ನೇ ಸಾಲಿನಲ್ಲಿ ಜೀವನ್ ವೆಲ್ ಫೇರ್ ಟ್ರಸ್ಟ್ (ರಿ) ಎಂಬ ಎನ್.ಜಿ.ಒ ನ್ನು ಸ್ಥಾಪಿಸಿ ಕಾರ್ಕಳ ಪೇಟೆಯ ಸಪ್ತಗಿರಿ ಕಾಂಪ್ಲೆಕ್ಸ್ನ ಬಾಡಿಗೆ ಮನೆಯಲ್ಲಿ ೪ ಬುದ್ದಿ ಮಾಂದ್ಯ ಮಕ್ಕಳನ್ನು ಒಟ್ಟುಗೂಡಿಸಿ ಈ ಬುದ್ದಿಮಾಂದ್ಯ ಮಕ್ಕಳ ತರಬೇತಿಗಾಗಿ ಅರುಣೋದಯ ವಿಶೇಷ ಶಾಲೆಯನ್ನು ಆರಂಭಿಸಿದರು. ದಿನೇ ದಿನೇ ಹೋದಂತೆ ಮಕ್ಕಳ ಸಂಖ್ಯೆ ಹೆಚ್ಚುತ್ತಾ ಬಂತು. ನಂತರ ಅಲ್ಲಿಂದ ಮಗ್ದಾಲಿನಾದಲ್ಲಿ ವರ್ಗಾವಣೆಗೊಂಡು ಅಲ್ಲಿ ೩ ವರ್ಷ ಶಾಲೆಯನ್ನು ನಡೆಸಿದರು. ಮಗ್ಗಲಿನಾದಲ್ಲಿ ಶಾಲೆ ನಡೆಸುತ್ತಿರುವಾಗಲೇ ಮಾಳದಲ್ಲಿ ಆರುಣೋದಯದ ವಿಶೇಷ ಶಾಲೆಯ ಶಾಖೆಯನ್ನು ತೆರೆದರು. ಆದರೆ ಮಗ್ಗಲಿನಾದಲ್ಲಿ ಮಕ್ಕಳ ಸಂಖ್ಯೆ ಹೆಚ್ಚುತ್ತಾ ಬಂದುದರಿಂದ ಮಾಳದಲ್ಲಿರುವ ಶಾಖೆಯನ್ನು ಮುಂದುವರೆಸಲು ಅಸಾಧ್ಯವಾಯಿತು. ಅದೇ ಸಾಲಿನಲ್ಲಿ ಅರುಣೋದಯ ವಿಶೇಷ ಶಾಲೆಗೆ ಸ್ವತಹ ಕಟ್ಟಡವನ್ನು ಮಾಜಿ ಶಾಸಕ ದಿ. ಗೋಪಾಲ್ ಭಂಡಾರಿಯವರ ಶಿಫಾರಸಿನ ಮೇರೆಗೆ
ಅವರ ಇಚ್ಚೆಯಂತೆ ಅಂದಿನ ತಹಶೀಲ್ದಾರರು 0.86 ಸೆನ್ಸ್ ಜಾಗವನ್ನು ಮಂಜೂರು ಮಾಡಿದರು. ನಿರಂತರ ಶ್ರಮದಿಂದ ತನ್ನ ಗುರಿಯನ್ನು ಸಾಧಿಸುವಲ್ಲಿ ಯಶಸ್ವಿಯಾಧರು. 2000ನೇ ಸಾಲಿನಲ್ಲಿ ತನ್ನ ಶಿಕ್ಷಕ ವೃತ್ತಿಯಿಂದ ನಿವೃತ್ತಿ ಹೊಂದಿದರು. ಬೆಥನಿ ಸಂಸ್ಥೆಯನ್ನು ತ್ಯಜಿಸಿ ವೈಯುಕ್ತಿಕವಾಗಿ ಸಮಾಜ ಸೇವೆಯಲ್ಲಿ ತೊಡಗಿಕೊಂಡರು.
ಈ ಪಿಂಚಣಿ ಹಣದಿಂದ ಮತ್ತು ಇತರೇ ಕೆಲವು ದಾನಿಗಳ ಸಹಾಯದಿಂದ ಈ ಜಾಗದಲ್ಲಿ ಕಟ್ಟಡವನ್ನು ಕಟ್ಟಲು ಆರಂಭಿಸಿದರು. 2004ರಲ್ಲಿ ಅರುಣೋದಯ ವಿಶೇಷ ಶಾಲೆಯ ಈ ಕಟ್ಟಡವು ಪೂರ್ಣಗೊಂಡು ಮಗ್ದಾಲಿನಾದಿಂದ ವಿಕಲಚೇತನ ಮಕ್ಕಳು ಈ ಶಾಲೆಗೆ ವರ್ಗಾವಣೆಗೊಂಡರು. ಅಂದಿನಿಂದ ಇಲ್ಲಿಯವರೆಗೆ ಈ ಶಾಲೆಯನ್ನು ಸಿಸ್ಟರ್ ಡೊನಾಲ್ಟಾ ಪಾಯ್ಸ್ ರವರು ಶ್ರಮ ಮತ್ತು ಜವಾಬ್ದಾರಿಯಿಂದ ಉಚಿತವಾಗಿ ನಡೆಸಿಕೊಂಡು ಬಂದಿದ್ದು ತನ್ನ ಜೀವನವನ್ನೇ ವಿಶೇಷ ಮಕ್ಕಳ ಸೇವೆಗಾಗಿ ಮುಡಿಪಾಗಿಟ್ಟಿದ್ದರು.