ನ.22 ರಂದು ಕುಂದಾಪುರ ಶ್ರೀ ಬಗಳಾಂಬ ತಾಯಿ ದೇವಳದ ದೀಪೋತ್ಸವ
Tuesday, November 19, 2024
ಕುಂದಾಪುರ: ಇಲ್ಲಿನ ಚಿಕ್ಕನ್ ಸಾಲ್ ರಸ್ತೆಯಲ್ಲಿರುವ ಶ್ರೀ ಬಗಳಾಂಬ ತಾಯಿ ದೇವಸ್ಥಾನದಲ್ಲಿ ವರ್ಷಂಪ್ರತಿ ಕಾರ್ತಿಕ ಮಾಸದಲ್ಲಿ ನಡೆಯುವ ಕಾರ್ತಿಕ ದೀಪೋತ್ಸವವು ನ.22 ರಂದು ನಡೆಯಲಿರುವುದು.
ಅಂದು ಸಂಜೆ 6.30ಕ್ಕೆ ಶ್ರೀ ಮಾಸ್ತಿಯಮ್ಮ ಭಜನಾ ಮಂಡಳಿ ಯವರಿಂದ ಭಜನೆ, ರಾತ್ರಿ 8 ಗಂಟೆಗೆ ವಿಶೇಷ "ರಂಗಪೂಜೆ", ದೀಪೋತ್ಸವ, ಮಹಾ ಪೂಜೆ ಬಳಿಕ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದು ದೇವಳದ ಪ್ರಕಟಣೆಯಲ್ಲಿ ತಿಳಿಸಿದೆ.