ನ.12 ರಂದು ನಡೆಯಲಿರುವ ಪುಣೆ ಚುನಾವಣೆ: ವಿಶೇಷ ಸಭೆಯಲ್ಲಿ ಶಾಸಕ ಕಾಮತ್ ಭಾಗಿ

ನ.12 ರಂದು ನಡೆಯಲಿರುವ ಪುಣೆ ಚುನಾವಣೆ: ವಿಶೇಷ ಸಭೆಯಲ್ಲಿ ಶಾಸಕ ಕಾಮತ್ ಭಾಗಿ


ಮಂಗಳೂರು: ಮಹಾರಾಷ್ಟ್ರ ಚುನಾವಣೆ ನಿಮಿತ್ತ ಇದೇ ನವಂಬರ್ 12ರಂದು ಪುಣೆಯಲ್ಲಿ ನಡೆಯಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಕುರಿತು ನಡೆದ ನಗರ ಸೇವಕರ (ಪಾಲಿಕೆ ಸದಸ್ಯರು) ವಿಶೇಷ ಸಭೆಯಲ್ಲಿ ಮಂಗಳೂರು ನಗರ ದಕ್ಷಿಣ ಶಾಸಕರಾದ ವೇದವ್ಯಾಸ ಕಾಮತ್ ಅವರು ಭಾಗವಹಿಸಿದರು.

ಕೇಂದ್ರ ನಾಗರಿಕ ವಿಮಾನಯಾನ ರಾಜ್ಯ ಸಚಿವ ಹಾಗೂ ಪುಣೆಯ ಸಂಸದ ಮುರಳೀಧರ್ ಮೊಹೋಲ್ ಅವರ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಮುಂಬರುವ ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದು ಸೇರಿದಂತೆ ಚುನಾವಣಾ ಕಾರ್ಯತಂತ್ರಗಳ ಬಗ್ಗೆ ಹಲವು ಸುತ್ತಿನ ಚರ್ಚೆ ನಡೆಯಿತು. ಶಾಸಕ ಕಾಮತ್ ಅವರು ಪ್ರಸ್ತುತ ಪುಣೆಯಲ್ಲಿದ್ದು ಪಾರ್ವತಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದಾರೆ. 

ಈ ಸಂದರ್ಭದಲ್ಲಿ ಪಾರ್ವತಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಪ್ರಶಾಂತ್ ದಿವಾಕರ್, ಕ್ಷೇತ್ರದ ಹಾಲಿ ಶಾಸಕಿ ಹಾಗೂ ಬಿಜೆಪಿ ಅಭ್ಯರ್ಥಿ ಮಾಧುರಿ ಮಿಸಾಲ್, ಎಲ್ಲಾ ನಗರ ಸೇವಕರು ಸೇರಿದಂತೆ ಅನೇಕ ಪ್ರಮುಖರು ಉಪಸ್ಥಿತರಿದ್ದರು.




Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article