ತೌಳವ ಇಂದ್ರ ಸಮಾಜದ ವಾರ್ಷಿಕ ಮಹಾಸಭೆ

ತೌಳವ ಇಂದ್ರ ಸಮಾಜದ ವಾರ್ಷಿಕ ಮಹಾಸಭೆ


ಮೂಡುಬಿದಿರೆ: ತೌಳವ ಇಂದ್ರ ಸಮಾಜ(ರಿ) ಇದರ ಮಹಾಸಭೆಯು ಶ್ರೀ ಧವಲಾ ಕಾಲೇಜ್‌ನ ಮಾತೃಶ್ರೀ ಸಭಾಭವನದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ನಿವೃತ್ತ ಶಿಕ್ಷಕ ಜ್ಞಾನ ಚಂದ್ರಇಂದ್ರ ಅವರು ವಹಿಸಿ ಮಾತನಾಡಿ, ಹಿಂದೆ ಇಂದ್ರರ ಕುಲಕಸುಬು ಪೌರೋಹಿತ್ಯ ಆದರೂ ಇಂದು ಜೀವನ ನಿರ್ವಹಣೆಗಾಗಿ ಬೇರೆ ಬೇರೆ ಉದ್ಯೋಗ, ಬುಸ್ಸಿನೆಸ್‌ಗಳನ್ನು ನೆಚ್ಚಿಕೊಂಡಿದ್ದಾರೆ ಪೌರೋಹಿತ್ಯ ಈಗ ಮುಖ್ಯ ಕಸುಬಾಗಿ ಉಳಿದಿಲ್ಲಾ ಎಂದರಲ್ಲದೆ, ಸದಸ್ಯರೆಲ್ಲರೂ ಅಂಗಸಂಸ್ಥೆಯಾದ ಸದ್ಧರ್ಮ ಸೌಹಾರ್ದ ಸಹಕಾರಿ ಸಂಸ್ಥೆ ಲಾಭದಲ್ಲಿ ನಡೆಯುತ್ತಿದ್ದು, ಆ ಸಹಕಾರಿಯನ್ನು ಇನ್ನೂ ಚೆನ್ನಾಗಿ ಬೆಳೆಸಬೇಕಾಗಿದೆ ಎಂದು ಹೇಳಿದರು.

ತುಳು ಇಂದ್ರರ ಜೀವನ ಶೈಲಿ, ಸಾಮಾಜಿಕ ಪರಂಪರೆ, ಪೌರೋಹಿತ್ಯದ ಮಾದರಿಗಳು ವಿಭಿನ್ನವಾಗಿಯೂ ಶಾಸ್ತ್ರೋಕ್ತವೂ ಆಗಿದ್ದು ಸರ್ವ ಜನಾಧರಣೆಗೆ ಪಾತ್ರವಾಗಿದೆ, ಈ ಉನ್ನತ ಪರಂಪರೆಯನ್ನು ಕಾಪಾಡುವುದು ಮತ್ತು ಪರಸ್ಪರ ಬಂಧುತ್ವ ಸಂವರ್ಧನೆ ಈ ಸಂಘಟನೆಯ ಉದ್ದೇಶ ಎಂದರು.

ನಂತರ ನಡೆದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ವಿದ್ವಾನ್ ಡಾ. ಎಸ್.ಪಿ. ವಿಧ್ಯಾಕುಮಾರ್, ವಿಜ್ಞಾನಿ ಡಾ. ಸುಕೇಶ್ ಕುಮಾರ್ ಬಜಿರೆ, ಹಾಗೂ ಪ್ರಾಂಶುಪಾಲೆ  ಆಶಾಲತಾ ದಾಂಡೇಲಿ, ಹಿರಿಯ ಪುರೋಹಿತರಾದ ಚಂದ್ರಶೇಖರ ಇಂದ್ರ ಬೋಳ ಬಸದಿ, ಮತ್ತು ದೇವಕುಮಾರ್ ಇಂದ್ರ ಮುಳಿಕಾರು ಬಸದಿ ಇವರುಗಳನ್ನು ಶಾಲು, ಹಾರ, ಫಲ ಕಾಣಿಕೆ, ಸ್ಮರಣಿಕೆ ಹಾಗೂ ಸನ್ಮಾನ ಪತ್ರ ನೀಡಿ ಗೌರವಿಸಲಾಯಿತು.

ಹತ್ತನೇ ತರಗತಿ ಹಾಗೂ ದ್ವಿತೀಯ ಪಿ.ಯು.ಸಿ.ಯ ಪ್ರತಿಭಾವಂತ ಸಮಾಜದ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು. ಪ್ರತಿಷ್ಠಾ ಪುರೋಹಿತರಾದ ಪದ್ಮಪ್ರಭ ಇಂದ್ರ, ನಾಗೇಂದ್ರ ಇಂದ್ರ, ಅಜಿತಕುಮಾರ್ ಇಂದ್ರ, ಅರುಣಕುಮಾರ್ ಇಂದ್ರ ಅವರನ್ನು ಗೌರವಿಸಲಾಯಿತು.

ದಿವ್ಯಾ ವೀರೇಂದ್ರ ರವರು ಪ್ರಸ್ತುತ ವರ್ಷದಲ್ಲಿ ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಅರ್ಪಣಾ ಕಾರ್ಯಕ್ರಮ ನೆರವೇರಿಸಿದರು. 

ನಿರ್ದೇಶಕ ಶೀತಲ್ ಕುಮಾರ್ ಸರಕಾರದಿಂದ ಅಲ್ಪಸಂಖ್ಯಾತರಿಗೆ ಕೊಡಮಾಡಿದ ಸೌಲಭ್ಯಗಳ ಮಾಹಿತಿ ನೀಡಿದರು. ಇಂದ್ರ ಸಮಾಜದ ಸದಸ್ಯರ ವಿಳಾಸದ ತಿದ್ದುಪಡಿ ಮಾಡಿದ ಡೈರೆಕ್ಟರಿ ಪ್ರತಿಯನ್ನು ಬಿಡುಗಡೆ ಗೊಳಿಸಲಾಯಿತು.

ಸದ್ಧರ್ಮ ಸೌಹಾರ್ಧ ಸಹಕಾರಿ ಅಧ್ಯಕ್ಷ ಪ್ರವೀಣ ಕುಮಾರ್ ಉಜಿರೆ, ನಿರ್ದೇಶಕರಾದ ವೃಷಭ ಕುಮಾರ್ ಇಂದ್ರ, ಅರ್ಕ ಕೀರ್ತಿ ಇಂದ್ರ, ಯುವತೌಳವ ಇಂದ್ರ ಸಮಾಜದ ಅಧ್ಯಕ್ಷರಾದ ಶ್ವೇತ ಪ್ರವೀಣ್ ಹಾಗೂ ಕಾರ್ಯದರ್ಶಿ ಅನಿತ್ ಕುಮಾರ್ ಬಿ. ಮತ್ತು ತೌಳವ ಇಂದ್ರ ಸಮಾಜದ ಎಲ್ಲಾ ನಿರ್ದೇಶಕರುಗಳು ಉಪಸ್ಥಿತರಿದ್ದರು. 

ನಿರ್ದೇಶಕ ಹರಿಶ್ಚಂದ್ರ ಜೈನ್ ಸನ್ಮಾನ ಕಾರ್ಯಕ್ರಮದ ನಿರೂಪಿಸಿದರು. ಉಪಾಧ್ಯಕ್ಷ ಎಂ.ಅಕ್ಷಯ ಕುಮಾರ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ಬಿ.ಅಭಯ ಕುಮಾರ್ ಇಂದ್ರ ವಾರ್ಷಿಕ ವರದಿ ಮಂಡಿಸಿದರು. ಕೋಶಾಧಿಕಾರಿ ವಿಜಯಕುಮಾರಿ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ನಿರ್ದೇಶಕ ಪ್ರಮೋದ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ಜೊತೆ ಕಾರ್ಯದರ್ಶಿ ಸುವಿಧಿ ಇಂದ್ರ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article