
20 ಲಕ್ಷ ವೆಚ್ಚದಲ್ಲಿ ಅಂಗನವಾಡಿ ಕಟ್ಟಡಕ್ಕೆ ಗುದ್ದಲಿಪೂಜೆ
ಮಂಗಳೂರು: ಅಂಗನವಾಡಿಗೆ ಸ್ವಂತ ಕಟ್ಟಡ ನಿರ್ಮಿಸುವ ನಿಟ್ಟಿನಲ್ಲಿ ಸರಕಾರಿ ಜಾಗ ಗುರುತಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೂಲಕ ಮಂಗಳೂರು ತಹಶೀಲ್ದಾರ್ ಅವರಿಗೆ ಸೂಚಿಸಲಾಗಿದೆ ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಹೇಳಿದರು.
ಮನಪಾ ವಾರ್ಡ್ 4ರ ಕೃಷ್ಣಾಪುರದಲ್ಲಿ ಅಂಗನವಾಡಿ ಕಟ್ಟಡಗಳು ನಗರ ವತಿಯಿಂದ ಕೋಡಿಕಲ್ ಸರಕಾರಿ ಶಾಲಾ ಕಟ್ಟಡದ ಬಳಿ 20 ಲಕ್ಷ ರೂ.ವೆಚ್ಚದಲ್ಲಿ ನೂತನ ಅಂಗನಾಡಿ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಉತ್ತರ ಕ್ಷೇತ್ರದಲ್ಲಿ 45ಕ್ಕೂ ಅಧಿಕ ಆಂಗನವಾಡಿ ಕೇಂದ್ರ ಸ್ವಂತ ಕಟ್ಟಡ ನಿರ್ಮಾಣವಾಗಬೇಕಿದೆ. ಇದಕ್ಕೆ ಬೇಕಾದ ಪೂರಕ ಕ್ರಮ ಕೈಗೊಳ್ಳಲಾಗುತ್ತಿದೆ.ಸರಕಾರದಿಂದ ಸಿಗುವ ಸೌಲಭ್ಯ ಅಂಗನವಾಡಿ ಮೂಲಕವೇ ಸಿಗುವುದರಿಂದ ಈ ಮೂಲ ವ್ಯವಸ್ಥೆ ಸದೃಢಗೊಳಿಸಬೇಕಿದೆ ಎಂದರು.
ಮೇಯರ್ ಮನೋಜ್ ಕುಮಾರ್ ಮಾತನಾಡಿ, ನಗರ ಪ್ರದೇಶದಲ್ಲಿ ಆಂಗನವಾಡಿಗಳಿಗೆ ಸ್ವಂತ ಕಟ್ಟಡಕ್ಕೆ ಬೇಕಾದ ಸ್ಥಳವನ್ನು ಗುರುತಿಸಲು ಪಾಲಿಕೆಯೂ ಸಹಕಾರ ನೀಡಲಿದೆ ಎಂದರು.ಮಂಗಳೂರು ಉತ್ತರ ಕ್ಷೇತ್ರಕ್ಕೆ ಕ್ರೀಡಾಂಗಣ ಹಾಗೂ ಕಾರ್ಯಕ್ರಮ ಆಯೋಜನೆಗೆ ಕೂಳೂರು ಬಳಿ ಇರುವ ಸ್ಥಳವನ್ನು ಅಭಿವೃದ್ಧಿ ಪಡಿಸುವ ಚಿಂತನೆ ನಡೆದಿದೆ ಎಂದರು.
ಸ್ಥಳೀಯ ಮನಪಾ ಸದಸ್ಯೆ ಲಕ್ಷ್ಮೀ ಶೇಖರ್ ದೇವಾಡಿಗ, ಎಇಇ ಫರಿದಾ ,ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ವೇತ ಎನ್.,ಮೇಲ್ವಿಚಾರಕಿ ಭವ್ಯ,ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ತಿಲಕ್ ರಾಜ್ ಕೃಷ್ಣಾಪುರ, ಲಕ್ಷ್ಮೀಶ ದೇವಾಡಿಗ, ಭರತ್‌ರಾಜ್ ಕೃಷ್ಣಾಪುರ, ಸದಾನಂದ ಸನಿಲ್, ಸತೀಶ್ ಉಪಸ್ಥಿತರಿದ್ದರು.