
ನ.22ರಂದು ಮಂಥನ ನೃತ್ಯೋತ್ಸವ
Tuesday, November 19, 2024
ಮಂಗಳೂರು: ನಗರದ ನೃತ್ಯಾಂಗನ್ ಟ್ರಸ್ಟ್ ಮಂಥನ-2024 ಎಂಬ ಭರತನಾಟ್ಯ ಉತ್ಸವದ ದಶಮ ಆವೃತ್ತಿಯನ್ನು ನ.22 ರಂದು ಸಂಜೆ ಡಾನ್‌ಬಾಸ್ಕೋ ಸಭಾಂಗಣದಲ್ಲಿ ನಡೆಯಲಿದೆ.
ಅಂದು ಸಂಜೆ 5.45ಕ್ಕೆ ಚೆನ್ನೈ ಮೂಲದ ಭರತನಾಟ್ಯ ಕಲಾವಿದೆ ಲಾವಣ್ಯಾ ಅನಂತ್ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಹೆಸರಾಂತ ಭರತನಾಟ್ಯ ಕಲಾವಿದರಾದ ಶಿಲ್ಪಾ ನಂಜಪ್ಪ (ಕೊಡಗು), ದಿವ್ಯಾ ನಾಯರ್(ಚೆನ್ನೈ), ಇಂದು ವೇಣು (ಬೆಂಗಳೂರು), ಮಂಜುಳಾ ಸುಬ್ರಹ್ಮಣ್ಯ (ಪುತ್ತೂರು) ಮತ್ತು ರಾಧಿಕಾ ಶೆಟ್ಟಿ (ಮಂಗಳೂರು) ತಮ್ಮ ಏಕವ್ಯಕ್ತಿ ಪ್ರದರ್ಶನ ಪ್ರದರ್ಶಿಸಲಿದ್ದಾರೆ.
ಹಿಮ್ಮೇಳದಲ್ಲಿ ವಿದ್ಯಾಶ್ರೀ ರಾಧಾಕೃಷ್ಣ (ನಟುವಾಂಗ), ನಂದಕುಮಾರ್ ಉಣ್ಣಿಕೃಷ್ಣನ್(ಗಾಯನ), ಕಾರ್ತಿಕ್ ವೈಧಾತ್ರಿ (ಮೃದಂಗ) ಮತ್ತು ನಿತೀಶ್ ಅಮ್ಮಣ್ಣಾಯ (ಕೊಳಲು) ಸಹಕರಿಸುವರು. ಕಲಾಸಕ್ತರಿಗೆ ಉಚಿತ ಪ್ರವೇಶ ಎಂದು ನೃತ್ಯಾಂಗನ್ ಸಂಸ್ಥೆಯ ನಿರ್ದೇಶಕಿ, ಕಲಾವಿದೆ ರಾಧಿಕಾ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.