
ದಕ್ಷಿಣ ಬ್ಲಾಕ್ ಮಹಿಳಾ ಕಾಂಗ್ರೆಸ್ ವತಿಯಿಂದ ಅರಶಿನ ಕುಂಕುಮ ಕಾರ್ಯಕ್ರಮ
ಮಂಗಳೂರು: ಭಾರತದ ಮೊದಲ ಮಹಿಳಾ ಪ್ರಧಾನಮಂತ್ರಿ ಭಾರತ ರತ್ನ ದಿವಂಗತ ಇಂದಿರಾ ಗಾಂಧಿಯವರ ಜನ್ಮದಿನದ ಪ್ರಯುಕ್ತ ನ.19 ರಂದು ಅತ್ತಾವರ ವಾರ್ಡಿನ ಬಾಬುಗುಡ್ಡೆಯ ಗ್ರಾಮ ಸಂಘದ ಸಭಾಂಗಣದಲ್ಲಿ ದಕ್ಷಿಣ ಬ್ಲಾಕ್ ಮಹಿಳಾ ಕಾಂಗ್ರೆಸ್ ವತಿಯಿಂದ ಅಧ್ಯಕ್ಷೆ ಚಂದ್ರಕಲ ಜೋಗಿ ಅವರ ನೇತೃತ್ವದಲ್ಲಿ ಅರಶಿನ ಕುಂಕುಮ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಗೇರು ಅಭ್ಯರ್ಥಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, 5 ಟರ್ಮ್ ಕಾರ್ಪೊರೇಟರ್ ಹಾಗೂ ಮಾಜಿ ಮೇಯರ್ ಜೆಸಿಂತ ವಿಜಯ ಅಲ್ಫ್ರೆಡ್ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಪ್ರಭಾಕರ್ ಸಿರಿಯನ್ ಮಂಗಳೂರು ದಕ್ಷಿಣ ಬ್ಲಾಕ್ ಮಹಿಳಾ ಕಾಂಗ್ರೆಸ್ ವತಿಯಿಂದ ಸನ್ಮಾನ ಮಾಡಲಾಯಿತು.
ಪ್ರತಿಪಕ್ಷ ನಾಯಕ ಹಾಗೂ ಕಾರ್ಪೊರೇಟರ್ ಪ್ರವೀಚಂದ್ರ ಆಳ್ವ, ಮೂಡ ಸದಸ್ಯರಾದ ಸಬಿತ ಮಿಸ್ಕಿತ್, ಕೆಪಿಸಿಸಿ ಸದಸ್ಯರಾದ ಅಪ್ಪಿ, ಕೆಪಿಎಂಸಿ ಪ್ರಧಾನ ಕಾರ್ಯದರ್ಶಿ ಗೀತಾ ಅತ್ತಾವರ, ಮಾಜಿ ಉಪಮೇ ಯರ್ ನವಿತಾ ಡಿ. ರಾವ್ ಮಾಜಿ ಕಾರ್ಪೊರೇಟರ್ ವಿಜಯಲಕ್ಷ್ಮಿ, ಕವಿತಾ ವಾಸು, ಶೈಲಜ, ಡಿಸಿಸಿ ಉಪಾಧ್ಯಕ್ಷರಾದ ಹೊನ್ನಯ್ಯ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಟಿ.ಕೆ. ಸುಧೀರ್, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ರಮನಂದ ಪೂಜಾರಿ, ಜಿಲ್ಲಾ ಕಾರ್ಯದರ್ಶಿ ಭಾಸ್ಕರ್ ರಾವ್, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯೆ ವಿದ್ಯಾ, ಬ್ಲಾಕ್ ಕಾರ್ಡಿನೇಟರ್ ಗೀತಾ ಪ್ರವೀಣ್, ಬ್ಲಾಕ್ ಜನರಲ್ ಸೆಕ್ರೆಟರಿ ಶಾಲಿನಿ ಪ್ರಕಾಶ್ ಲವೀನಾ, ಮೇಬಲ್, ನೀನಾ, ಬೆನಿಡಿಟ್ಟ, ಸವಿತಾ, ಭಾರತಿ ವಿದ್ಯಾ ತೋರಸ್,ಮಾಲತಿ ಅತ್ತಾವರ ವಾರ್ಡಿನ ಅಧ್ಯಕ್ಷರಾದ ಜಯಂತ್ ಪೂಜಾರಿ, ಮೊಹಮ್ಮದ್ ನವಾಜ್, ಕೀರ್ತಿರಾಜ್, ಬೂತು ಕಮಿಟಿಯ ಸದಸ್ಯರು ಉಪಸ್ಥಿತರಿದ್ದರು. ಲವೀನ ನಿರೂಪಿಸಿ, ವಿದ್ಯಾ ವಂದಿಸಿದರು.