
ಪರಿಶಿಷ್ಟ ಘಟಕದ ಪದಗ್ರಹಣದ ಪೂರ್ವ ಭಾವಿ ಸಭೆ
Tuesday, November 19, 2024
ಮಂಗಳೂರು: ದ.ಕ. ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಘಟಕದ ಪದಗ್ರಹಣದ ಪೂರ್ವ ಭಾವಿ ಸಭೆಯ ಸೋಮವಾರ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ನಡೆಯಿತು.
ಈ ವೇಳೆ ಮಾತಾಡಿದ ಘಟಕದ ಜಿಲ್ಲಾಧ್ಯಕ್ಷ ದಿನೇಶ್ ಮೂಳುರು, ಜಿಲ್ಲೆಯಲ್ಲಿ ಪರಿಶಿಷ್ಟ ಘಟಕವನ್ನು ಪುನರ್ ರಚಿಸಿ ಪಕ್ಷ ಸಂಘಟನೆಗೆ ಒತ್ತು ನೀಡಲಾಗುವುದು. ಪಕ್ಷದ ಕೆಲಸ ಮಾಡುವಾಗ ಎಲ್ಲರೂ ಒಂದೇ ಗುರಿಯೊಂದಿಗೆ ಕೆಲಸ ಮಾಡಬೇಕು. ಭಿನ್ನಾಭಿಪ್ರಾಯಕ್ಕೆ ಅವಕಾಶ ಕೊಡಬಾರದು ಎಂದು ಸೂಚಿಸಿದರು.
ಮುಖಂಡರಾದ ಪ್ರಧಾನ ಕಾರ್ಯದರ್ಶಿ ನಝೀರ್ ಬಜಾಲ್, ಜನಾರ್ದನ ಚೆಂಡ್ತಿಮಾರ್ ಬಂಟ್ವಾಳ, ಅಭಿಲಾಶ್, ವಿವೇಕಾನಂದ, ಅಣ್ಣು ಕಂಡಿಗ, ದಿನೆಶ್ ಕಾಪಿಕಾಡ್, ಮಹೇಶ್ ಸುಳ್ಯ, ಗಣೇಶ್ ಪ್ರಸಾದ್ ಮೂಡಬಿದ್ರೆ, ರೋಹಿತ್ ಉಳ್ಳಾಲ್, ವಿಜಯಲಕ್ಷ್ಮೀ, ನಾಗವೇಣಿ, ಕಿರಣ್ ಕುಮಾರ್ ಕೊಡಿಯಾಲ್ ಬೈಲ್ ಮತ್ತಿತರರು ಉಪಸ್ಥಿತರಿದ್ದರು.