.jpeg)
ವ್ಯಾಟಿಕನ್ ಸಮ್ಮೇಳನಕ್ಕೆ ಸ್ಪೀಕರ್ ಖಾದರ್
Friday, November 29, 2024
ಮಂಗಳೂರು: ಕರ್ನಾಟಕ ವಿಧಾನ ಸಭೆಯ ಸ್ಪೀಕರ್ ಯು.ಟಿ.ಖಾದರ್ ಅವರು ರೋಮ್‌ನ ವ್ಯಾಟಿಕನ್ ಸಿಟಿಯಲ್ಲಿ ನ.30ರಂದು ನಡೆಯಲಿರುವ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸುವುದಕ್ಕಾಗಿ ಮಂಗಳೂರಿನಿಂದ ಗುರುವಾರ ವ್ಯಾಟಿಕನ್‌ಗೆ ತೆರಳಿದರು.
ಯು.ಟಿ. ಖಾದರ್ ಅವರು ರೋಮ್‌ನ ವ್ಯಾಟಿಕನ್ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ‘ ಮಾನವೀಯತೆಗಾಗಿ ಧರ್ಮಗಳ ಒಗ್ಗಟ್ಟು’ ಎಂಬ ವಿಷಯದ ಬಗ್ಗೆ ಮಾತನಾಡಲಿದ್ದಾರೆ.
ಭಾರತದಿಂದ ಆಯ್ದ ಕೆಲವು ಮಂದಿಗೆ ಮಾತ್ರ ವ್ಯಾಟಿಕನ್ಗೆ ಹೋಗುವ ಅವಕಾಶ ಸಿಕ್ಕಿದೆ. ಜನಪ್ರತಿನಿಧಿಯಾಗಿ ಅಲ್ಲಿ ಮಾತನಾಡಲು ಅವಕಾಶ ಒದಗಿ ಬಂದಿರುವುದು ಒಂದು ಅಪೂರ್ವ ಅವಕಾಶ ಎಂದು ಭಾವಿಸಿರುವೆನು ಎಂದು ಯು.ಟಿ. ಖಾದರ್ ತಿಳಿಸಿದ್ದಾರೆ.