ಕಾನೂನು ಕ್ರಮಕ್ಕೆ ಸವಾದ್ ಸುಳ್ಯ ಆಗ್ರಹ

ಕಾನೂನು ಕ್ರಮಕ್ಕೆ ಸವಾದ್ ಸುಳ್ಯ ಆಗ್ರಹ

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯ ಅಂಕಪಟ್ಟಿ ಸಂಬಂಧಿಸಿದಂತೆ ಎನ್‌ಎಸ್‌ಯುಐ ಉಳ್ಳಾಲ ತಾಲೂಕು ಸಮಿತಿಯು ಕಳೆದ ತಿಂಗಳು ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರು ಹಾಗೂ ಉನ್ನತ ಶಿಕ್ಷಣ ಸಚಿವರನ್ನು ಭೇಟಿ ಮಾಡಿ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿತ್ತು, ಸ್ಪೀಕರ್ ಯು.ಟಿ. ಖಾದರ್ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಶೀಘ್ರವೇ ಪರಿಹರಿಸುವ ಭರವಸೆ ನೀಡಿದ್ದಾರೆ

ಆದರೆ ಅ.ಭಾ.ವಿ.ಪ. ಸಂಘಟನೆ ಇಂದು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅಂಕಪಟ್ಟಿ ವಿಷಯಕ್ಕೆ ಸಂಬಂಧಿಸಿದಂತೆ ಮಂಗಳ ಗಂಗೋತ್ರಿಯಲ್ಲಿ ಪ್ರತಿಭಟನೆ ನಡೆಸಿ ಕೆಲ ಅ.ಭಾ.ವಿ.ಪ. ನಾಯಕರು ಗೂಂಡಾಗಿರಿ ಮಾಡಿ ವಿಶ್ವವಿದ್ಯಾನಿಲಯದ ಗಾಜನ್ನು ಪುಡಿ ಮಾಡಿದ್ದಾರೆ.

ವಿದ್ಯಾರ್ಥಿಗಳ ನ್ಯಾಯಕ್ಕಾಗಿ ಪ್ರತಿಭಟಿಸುವುದು ಪ್ರತಿ ವಿದ್ಯಾರ್ಥಿ ಸಂಘಟನೆಗಳ ಹಕ್ಕಾಗಿದೆ, ಇದಕ್ಕೆ ನಮ್ಮ ಬೆಂಬಲವೂ ಕೂಡ ಇದೆ, ಆದರೆ ಬೇಜವಾಬ್ದಾರಿಯಿಂದ ಕೆಲ ಗೂಂಡಾಗಿಯಂತೆ ವರ್ತಿಸಿ  ವಿಶ್ವವಿದ್ಯಾನಿಲಯದ ಸೊತ್ತಿಗೆ ಹಾನಿ ಮಾಡಿರುವುದು ಖಂಡನೀಯ. ಈ ಘಟನೆಗೆ ಸಂಬಂಧಿಸಿ ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸಭೆಯಲ್ಲಿ ತೀವ್ರವಾಗಿ ಖಂಡಿಸಿ ಹಾನಿ ಮಾಡಿದ ವಿದ್ಯಾರ್ಥಿಗಳ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಲಾಗಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಸವಾದ್ ಸುಳ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article